Return to Video

ನಿಮ್ಮ ಹಿತ್ತಲಿನಲ್ಲಿ ಅರಣ್ಯವನ್ನು ಹೇಗೆ ಬೆಳೆಯುವುದು?

  • 0:01 - 0:03
    ಇದು ಮಾನವ-ನಿರ್ಮಿತ ಕಾಡು
  • 0:04 - 0:07
    ಈ ಕಾಡು ಎಕರೆ ಎಕರೆ ಹಾರುಡಬಹುದು
  • 0:07 - 0:10
    ಹಾಗು ನಿಮ್ಮ ಮನೆಯ ತೋಟದಷ್ಟು
  • 0:10 - 0:13
    ಚಿಕ್ಕ ಜಾಗದಲ್ಲೂ ಹೊಂದಿಕೊಳ್ಳಬಹುದು.
  • 0:15 - 0:19
    ಈ ಪ್ರತಿ ಒಂದು ಕಾಡಿಗೆ ಬರಿ ಎರಡು ವರ್ಷಗಳು.
  • 0:19 - 0:22
    ನನ್ನ ಮನೆಯ ಹಿಂಭಾಗದಲ್ಲಿ ನನನ್ನದೇ ಒಂದು ಕಾಡಿದೆ.
  • 0:23 - 0:25
    ಇದು ಬಹಳಷ್ಟು ಜೀವವೈವಿಧ್ಯದ ಆಕರ್ಷಿಸುತ್ತದೆ.
  • 0:26 - 0:30
    (ಕೋಗಿಲೆಯ ಕರೆ)
  • 0:30 - 0:31
    ನಾನು ಇದ್ದನ್ನೇ ಕೇಳಿ
  • 0:31 - 0:32
    ಪ್ರತಿ ದಿನ ಬೆಳಗ್ಗೆ
  • 0:32 - 0:34
    ಡಿಸ್ನಿ ರಾಜಕುಮಾರಿಯ
  • 0:34 - 0:34
    ಹಾಗೆ ಏಳುತ್ತೆನೇ
  • 0:34 - 0:35
    ( ನಗೆ )
  • 0:35 - 0:36
    ನಾನೊಬ್ಬ ಉದ್ಯಮಿ.
  • 0:36 - 0:39
    ಈ ಕಾಡುಗಳ್ಳನು ಬೆಳಸಲು ಅನುಕೂಲ
    ಮಾಡಿಕೊಡುತ್ತೇನೆ
  • 0:40 - 0:43
    ನಾವು ವೃತ್ತಿಪರವಾಗಿ ಕಾರ್ಖಾನೆಗಳಲ್ಲಿ,
  • 0:43 - 0:44
    ಹೊಲಗದ್ದೆಗಳಲ್ಲಿ,
  • 0:44 - 0:45
    ಶಾಲೆಗಳಲ್ಲಿ,
  • 0:46 - 0:47
    ಮನೆಗಳಲ್ಲಿ,
  • 0:48 - 0:49
    ರೆಸಾರ್ಟುಗಳಲ್ಲಿ,
  • 0:50 - 0:52
    ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ,
  • 0:53 - 0:54
    ಸಾರ್ವಜನಿಕ ಉದ್ಯಾನವನಗಳಲ್ಲಿ
  • 0:55 - 0:56
    ಮತ್ತು ಒಂದು ಮೃಗಾಲಯದಲ್ಲೂ ಸಹಾ
  • 0:56 - 0:57
    ಇಂತ ಒಂದು ಕಾಡನ್ನು
  • 0:57 - 0:59
    ಬೆಳಸಲು ಸಹಾಯ ಮಾಡ್ದಿದೀವಿ
  • 0:59 - 1:04
    ಅರಣ್ಯ ಪ್ರಾಣಿಗಳು ಒಟ್ಟಾಗಿ ವಾಸಿಸುವ
    ಭೂಮಿಯ ಪ್ರತ್ಯೇಕಿತ ಒಂದು ತುಂಡಲ್ಲ
  • 1:04 - 1:08
    ಅರಣ್ಯ ನಮ್ಮ ನಗರ ಅಸ್ತಿತ್ವದ ಅವಿಭಾಜ್ಯ
    ಭಾಗವಾಗಿರಬಹುದು.
  • 1:10 - 1:15
    ನನಗೆ ಅರಣ್ಯವೆಂದರೆ ದಟ್ಟವಾದ ಮರಗಳಿರೋ ಸ್ಥಳ,
    ಅಲ್ಲಿ ನಡೆಯಲು ಸಾಧ್ಯವಿಲ್ಲ.
  • 1:16 - 1:19
    ಎಷ್ಟು ದೊಡ್ದು ಚಿಕ್ಕದು ಎನ್ನುವುದು ವಿಷಯವಲ್ಲ
  • 1:19 - 1:22
    ನಾವು ಇಂದು ವಾಸಿಸುವ ವಿಶ್ವದ ಬಹುಭಾಗ ಕಾಡಾಗಿತ್ತು
  • 1:22 - 1:24
    ಇದು ಮಾನವ ಹಸ್ತಕ್ಷೇಪದ ಮೊದಲು.
  • 1:24 - 1:27
    ನಂತರ ಆ ಕಾಡುಗಳ ಮೇಲೆ ನಮ್ಮ ನಗರಗಳು
    ನಿರ್ಮಿಸಿದ್ವಿ
  • 1:27 - 1:29
    ಸಾವ್ ಪಾಲೊಯ ಹಾಗೆ
  • 1:29 - 1:31
    ಈ ಗ್ರಹದ ಮೇಲೆ ಇರುವ 8.4 ಮಿಲಿಯನ್ ಇತರ ಜಾತಿಗಳ
  • 1:31 - 1:36
    ಹಾಗೆಯೇ ನಾವು ಕೂಡ,
    ಈ ಪ್ರಕೃತಿಯ ಭಾಗ ಎಂದು ಮರೆತೇವು.
  • 1:36 - 1:40
    ನಮ್ಮ ಆವಾಸಸ್ಥಾನ ನಮ್ಮ ಸ್ವಾಭಾವಿಕ
    ಅವಸಾನವಾಗಿರುದು ನಿಂತು ಹೋಯಿತು
  • 1:40 - 1:42
    ಆದರೆ ಇನ್ನು ಮುಂದೆ ನಮಲ್ಲಿ ಕೆಲವೊಬ್ಬರಿಗೆ
    ಹಾಗಿಲ್ಲ
  • 1:43 - 1:47
    ಇಂದು ಕೆಲವು ಇತರರು ಮತ್ತು
    ನಾನು ನಗರದಲ್ಲಿ ಎಲ್ಲೆಡೆ
  • 1:47 - 1:49
    ಕಾಡುಗಳನ್ನು ವೃತ್ತಿಪರವಾಗಿ ಬೆಳೆಸುತ್ತೇವೆ.
  • 1:49 - 1:51
    ನಾನೊಬ್ಬ ಕೈಗಾರಿಕಾ ಎಂಜಿನಿಯರ್.
  • 1:51 - 1:53
    ನಾನು ಕಾರುಗಳು ನಿರ್ಮಾನಿಸೋದ್ರಲ್ಲಿ ಪರಿಣಿತ.
  • 1:54 - 1:57
    ನಾನು ಮುಂಚೆ ಟೊಯೋಟಾದಲ್ಲಿ
    ಕೆಲಸ ಮಾಡುತ್ತಿದ್ದೆ.
  • 1:57 - 1:59
    ಅಲ್ಲಿ ನಾನು ನೈಸರ್ಗಿಕ ಸಂಪನ್ಮೂಲಗಳನ್ನು
  • 1:59 - 2:02
    ಉತ್ಪನ್ನಗಳಾಗಿ ಪರಿವರ್ತಿಸಲು ಕಲಿತೆ. ಉದಾಹರಣೆಗೆ
  • 2:02 - 2:05
    ನಾವು ರಬ್ಬರ್ ಮರದ ರಸವನ್ನು
    ಹನಿ ಹನಿಯಾಗಿ ಬೀಳಿಸಿ,
  • 2:05 - 2:07
    ಅದನ್ನು ಕಚ್ಚಾ ರಬ್ಬರ್ ಆಗಿ ಪರಿವರ್ತಿಸಿ, ನಂತರ
  • 2:07 - 2:09
    ಅದರಿಂದ ಟೈರ್ ತೈಯಾರಿಸುತ್ತಿದ್ದ್ವಿ. -ಉತ್ಪನ್ನ
  • 2:09 - 2:13
    ಆದರೆ ಈ ಉತ್ಪನ್ನಗಳು ಮತ್ತೆ ನೈಸರ್ಗಿಕ
    ಸಂಪನ್ಮೂಲವಾಗಿ ಮಾರ್ಪಡಿಸಲು ಸಾಧ್ಯವಿಲ್ಲ.
  • 2:13 - 2:16
    ನಾವು ಅಂಶಗಳನ್ನು ಪ್ರಕೃತಿಯಿಂದ
    ಬೇರೇಮಾಡುತ್ತೀವಿ ಮತ್ತು ಅವುಗಳನ್ನ
  • 2:16 - 2:19
    ಬದಲಾಯಿಸಲಾಗದ ಸ್ಥಿತಿಯಲ್ಲಿ ಪರಿವರ್ತಿಸುತೆವೆ.
  • 2:19 - 2:21
    ಇದೇ ಕೈಗಾರಿಕಾ ಉತ್ಪಾದನೆ
  • 2:22 - 2:25
    ಮತ್ತೊಂದೆಡೆ, ಪ್ರಕೃತಿ, ಸಂಪೂರ್ಣವಾಗಿ ವಿರುದ್ಧ
    ರೀತಿಯಲ್ಲಿ ಕೆಲಸ ಮಾಡುತ್ತದೆ
  • 2:26 - 2:28
    ನೈಸರ್ಗಿಕ ವ್ಯವಸ್ಥೆಯು ಅಂಶಗಳನ್ನು
  • 2:28 - 2:30
    ಅಣು ಅಣುವಾಗಿ ಒಟ್ಟುಗೂಡಿಸಿ ಉತ್ಪಾದಿಸುತ್ತದೆ
  • 2:32 - 2:38
    ಎಲ್ಲಾ ನೈಸರ್ಗಿಕ ಉತ್ಪನ್ನಗಳು ಮತ್ತೆ
    ನೈಸರ್ಗಿಕ ಸಂಪನ್ಮೂಲವಾಗಿ ಮಾರ್ಪಡುತ್ತೇವೆ.
  • 2:38 - 2:41
    ಇದು ನನ್ನ ಸ್ವಂತ ಮನೆಯ ಹಿಂಭಾಗದಲ್ಲಿ
  • 2:41 - 2:44
    ಒಂದು ಅರಣ್ಯ ಬೆಳೆಸಿದಾಗ ನಾನು ಕಲಿತ ವಿಷಯ.
  • 2:44 - 2:48
    ಇದೇ ನಾನು ಮೊದಲ ಬಾರಿ ಪ್ರಕೃತಿಯೊಂದಿಗೆ ಕೆಲಸ
  • 2:48 - 2:49
    ಮಾಡ್ದಿದು. ಅದರ ವಿರುದ್ಧವಲ್ಲ
  • 2:50 - 2:52
    ಅಂದಿನಿಂದ, ನಾವು ವಿಶ್ವದಾದ್ಯಂತ
  • 2:52 - 2:56
    25 ನಗರಗಳಲ್ಲಿ 75 ಕಾಡುಗಳು ಬೆಳೆಸಿದ್ದೇವೆ.
  • 2:58 - 3:03
    ನಾವು ಪ್ರತಿಸಲ ಹೊಸ ಸ್ಥಳದಲ್ಲಿ ಕೆಲಸ ಮಾಡುವಾಗ,
    ಒಂದು ಅರಣ್ಯ ಬೆಳೆಯಲು ಅಗತ್ಯವಿದೆರೋ
  • 3:03 - 3:07
    ಪ್ರತಿಯೊಂದು ಅಂಶ ನಮ್ಮ ಸುತ್ತಲೇ ಲಭ್ಯವಾಗುತ್ತವೆ
  • 3:07 - 3:09
    ನಾವು ಮಾಡಬೇಕಾದಿಷ್ಟೇ ಎಲ್ಲಾ ಅಂಶಗಳನ್ನು ಒಟ್ಟು
  • 3:09 - 3:12
    ತರುವುದು ಮತ್ತು ಪ್ರಕೃತಿ ವಶದಲ್ಲಿ ಒಪ್ಪೊಡಿಸೋದು
  • 3:13 - 3:16
    ನಾವು ಅರಣ್ಯ ಬೆಳೆಯಲು ಮಣ್ಣಿನಿಂದ ಆರಂಭಿಸುತ್ತೇವೆ
  • 3:16 - 3:19
    ಅದರಲ್ಲಿರೋ ಗುಣಗಳ ಕೊರತೆ ಗುರುತಿಸಲು, ಅದನ್ನು
  • 3:19 - 3:21
    ಮುಟ್ಟಿ ಅನುಭಾವಿಸುತ್ತೇವೆ ಹಾಗು ರುಚಿಸ್ಸುತೇವೇ
  • 3:22 - 3:25
    ಮಣ್ಣಿನಲ್ಲಿ ಸಣ್ಣ ಕಣಗಳಿದ್ದರೆ
    ಅದು ದಟ್ಟವಾಗುವುದು
  • 3:25 - 3:27
    ನೀರು ಜಿನುಗುದಂತೆ ದಟ್ಟ.
  • 3:28 - 3:32
    ನಾವು ಆ ಸ್ಥಳದಲ್ಲಿ ಲಭ್ಯವಿರುವ ಸ್ವಲ್ಪ
    ಜೀವರಾಶಿಯನ್ನು ಮಿಶ್ರಣ ಮಾಡುತ್ತೇವೆ,
  • 3:33 - 3:36
    ಇದು ಮಣ್ಣನ್ನು ಹೆಚ್ಚು ಸರಂಧ್ರ ಮಾಡುವುದರಲ್ಲಿ
    ಸಹಾಯ ಮಾಡುತ್ತದೆ.
  • 3:37 - 3:39
    ನೀರು ಈಗ ಜಿನುಗಬಹುದು
  • 3:39 - 3:43
    ಮಣ್ಣಿನಲ್ಲಿ ನೀರು ಹಿಡಿವುವಾ
    ಸಾಮರ್ಥ್ಯ ಇಲ್ಲದಿದ್ದರೆ
  • 3:43 - 3:45
    ನಾವು ಇನ್ನು ಸ್ವಲ್ಪ ಜೀವರಾಶಿ ಬೆರೆಸುತ್ತೆವೆ
  • 3:45 - 3:49
    ಕೆಲವು ನೀರು ಹೀರಿಕೊಳ್ಳುವ ವಸ್ತುಗಳಾದ
    ಕಸಕಡ್ಡಿ ಅಥವಾ ಕಬ್ಬಿನ ಸಿಪ್ಪೆ ಬೆರಸಬಹುದಾದ,
  • 3:49 - 3:51
    ಆದ್ದರಿಂದ ಮಣ್ಣು ನೀರು ಹಿಡಿದಿಟ್ಟುಕೊಳ್ಳುತ್ತದೆ
  • 3:51 - 3:54
    ಮತ್ತು ತೇವಾಂಶವುಳ್ಳ ಆಗಿರುತ್ತದೆ.
  • 3:54 - 3:57
    ಸಸ್ಯಗಳಿಗೆ, ಬೆಳೆಯಲು ನೀರು, ಸೂರ್ಯನ ಮತ್ತು
    ಪೋಷಣೆಯ ಅಗತ್ಯವಿದೆ.
  • 3:59 - 4:02
    ಒಂದು ವೇಳೆ ಮಣ್ಣಿನಲ್ಲಿ ಯಾವುದೇ
    ಪೋಷಣೆ ಇಲ್ಲದೆ ಹೋದರೆ ?
  • 4:02 - 4:05
    ನಾವು ಪೌಷ್ಟಿಕಾಂಶವನ್ನು ನೇರವಾಗಿ
    ಮಣ್ಣಿನ ಸೇರಿಸುವುದಿಲ್ಲ
  • 4:05 - 4:06
    ಅದು ಕೈಗಾರಿಕಾ ಹಾದಿ.
  • 4:06 - 4:09
    ಮತ್ತು ಇದು ಪ್ರಕೃತಿಯ ವಿರುದ್ಧ ಹೋಗುತ್ತದೆ.
  • 4:09 - 4:12
    ನಾವು ಬದಲಿಗೆ ಮಣ್ಣಿಗೆ
    ಸೂಕ್ಷ್ಮಜೀವಿಗಳನ್ನು ಸೇರಿಸುತ್ತೆವೆ.
  • 4:12 - 4:15
    ಅವು ನೈಸರ್ಗಿಕವಾಗಿ ಪೋಷಕಾಂಶಗಳನ್ನು
    ಮಣ್ಣಿನಲ್ಲೆ ಉತ್ಪಾಧಿಸುತ್ತವೆ
  • 4:15 - 4:18
    ಅವು ಮಣ್ಣಿನಲ್ಲಿ ಮಿಶ್ರಣೆ ಮಾಡಿರೋ
    ಜೀವರಾಶಿಯನ್ನು ತಿನ್ನುತ್ತವೆ,
  • 4:18 - 4:20
    ಅವು ಮಾಡಬೇಕಾಗಿರೋದಿಷ್ಟೇ ತಿಂದು ಅಹವರ್ತಿಸುವುದು
  • 4:20 - 4:22
    ಅವುಗಳ ಸಂಖ್ಯೆ ಬೆಳೆದಂತೆ,
  • 4:22 - 4:24
    ಮಣ್ಣು ಮತ್ತೆ ಉಸಿರಾಡಲು ಪ್ರಾರಂಭಿಸುವುದು.
  • 4:24 - 4:26
    ಅದು ಜೀವಂತವಾಗುತ್ತದೆ
  • 4:26 - 4:28
    ನಾವು ಆ ಸ್ಥಳೀಯ ಮರಗಳ ಜಾತಿ ಸಮೀಕ್ಷಿಸುತ್ತೆವೆ
  • 4:28 - 4:30
    ಯಾವುದು ಸ್ಥಳೀಯ ಅಥವಾ ಅಲ್ಲ ಎಂಬುದನ್ನು
  • 4:30 - 4:31
    ನಾವು ಹೇಗೆ ನಿರ್ಧರಿಸುತ್ತೆವೆ ?
  • 4:31 - 4:35
    ಯಾವುದು ಮಾನವನ ಹಸ್ತಕ್ಷೇಪದ ಮೊದಲ
    ಅಸ್ತಿತ್ವದಲ್ಲಿದ್ದವು ಅವು ಸ್ಥಳೀಯ
  • 4:36 - 4:37
    ಎನ್ನುವುದು ಸರಳ ನಿಯಮ.
  • 4:38 - 4:42
    ನಾವು ಒಂದು ರಾಷ್ಟ್ರೀಯ ಉದ್ಯಾನವನವನ್ನು
  • 4:42 - 4:46
    ಸಮೀಕ್ಷಿಸಿ ಕಳೆದ ನೈಸರ್ಗಿಕ ಅರಣ್ಯದ
    ಅವಶೇಷಗಳನ್ನು ಹುಡುಕುತ್ತೇವೆ
  • 4:47 - 4:49
    ನಾವು ಪವಿತ್ರ ತೋಪುಗಳ
    ಅಥವಾ ಹಳೆಯ ದೇವಾಲಯಗಳ
  • 4:49 - 4:52
    ಸುತ್ತಿರೋ ಪವಿತ್ರ ಕಾಡ ಸಮೀಕ್ಷೆ ನಡೆಸುತ್ತೇವೆ
  • 4:53 - 4:55
    ಅಲ್ಲಿ ಏನು ದೊರೆಯದಿದ್ದಲ್ಲಿ
  • 4:55 - 4:57
    ನಾವು ವಸ್ತು ಸ೦ಗ್ರಾಲಯ ಹೋಗಿ
  • 4:57 - 5:01
    ಬಹಳ ಹಿಂದೆ ಅಸ್ತಿತ್ವದಲ್ಲಿರ್ವ ಬೀಜಗಳನ್ನು ಅಥವಾ
    ಮರಗಳ ಕಟ್ಟಿಗೆ ನೋಡುತ್ತೇವೆ
  • 5:03 - 5:09
    ನಾವು ಮರಗಳ ತಳಿಗಳು ಗುರುತಿಸಲು ಆ ಸ್ಥಳದ ಹಳೆಯ
    ವರ್ಣಚಿತ್ರಗಳ, ಕವನಗಳ ಮತ್ತು ಸಾಹಿತ್ಯಾದ
  • 5:09 - 5:11
    ಸಂಶೋಧನೆ ನಡೆಸುತ್ತೇವೆ
  • 5:11 - 5:13
    ನಮ್ಮಗೆ ಒಮ್ಮೆ ಮರಗಳು ತಿಳಿದರೆ
  • 5:13 - 5:15
    ನಾವು ಅವನ್ನು ನಾಲ್ಕು ವಿವಿಧ ಪದರಗಳಲ್ಲಿ
    ವಿಭಜಿಸುತ್ತೇವೆ:
  • 5:15 - 5:18
    ಪೊದೆ ಪದರ, ಉಪ-ಮರ ಪದರ,
    ಮರ ಪದರ ಮತ್ತು ಮೇಲಾವರಣ ಪದರ.
  • 5:18 - 5:21
    ನಾವು ಪ್ರತಿ ಪದರದ ಅನುಪಾತಗಳು ಸ್ಥಿರಪಡಿಸಿ,
  • 5:21 - 5:26
    ನಂತರ ಮಿಶ್ರಣದಲ್ಲಿ ಪ್ರತಿ ಮರದ ಜಾತಿಯ ಪ್ರತಿಶತ
    ನಿರ್ಧರಿಸುತ್ತೇವೆ
  • 5:27 - 5:28
    ನಾವು ಒಂದು ಹಣ್ಣು ಅರಣ್ಯ ಮಾಡುತ್ತಿದ್ದಲ್ಲಿ,
  • 5:28 - 5:31
    ನಾವು ಹಣ್ಣಿನ ಮರಗಳ ಶೇಕಡಾ ಹೆಚ್ಚಿಸುತ್ತೇವೆ.
  • 5:31 - 5:34
    ಇದು ಒಂದು ಹೂಬಿಡುವ ಅರಣ್ಯ ಆಗಿರಬಹುದು,
  • 5:34 - 5:36
    ಬಹಳಷ್ಟು ಹಕ್ಕಿಗಳು ಅಥವಾ ಜೇನುನೊಣಗಳನ್ನು
  • 5:36 - 5:39
    ಆಕರ್ಷಿಸುವಂತ ಅರಣ್ಯ ಅಥವಾ ಒಂದು ಸರಳವಾದ
  • 5:39 - 5:43
    ಸ್ಥಳೀಯ, ನಿತ್ಯಹರಿದ್ವರ್ಣದ ಕಾಡು ಆಗಿರಬಹುದು
  • 5:44 - 5:47
    ನಾವು ಬೀಜಗಳು ಸಂಗ್ರಹಿಸಿ
    ಮತ್ತು ಅವುಗಲ್ಲಿಂದ ಸಸಿಗಳನ್ನು ಚಿಗುರಿಸುತ್ತವೆ
  • 5:47 - 5:50
    ನಾವು ಒಂದೇ ಪದರಕ್ಕೆ ಸೇರಿದ ಮರಗಳನ್ನು
  • 5:50 - 5:52
    ಅಕ್ಕ-ಪಕ್ಕ ನೆಟದಂತೆ ಖಚಿತಪಡಿಸಿಕೊಳ್ಳುತೇವೆ.
  • 5:52 - 5:55
    ಇಲ್ಲದಿದ್ದರೆ ಅವು ಎತ್ತರದ ಬೆಳೆಯಲು
    ಅದೇ ಲಂಬ ಜಾಗಕ್ಕಾಗಿ ಹೋರಾಡುತ್ತೇವೆ.
  • 5:55 - 5:58
    ನಾವು ಸಸಿಗಳನ್ನು ಪರಸ್ಪರ ಹತ್ತಿರ ನೆಟ್ಟುತೇವೆ.
  • 5:59 - 6:02
    ಮೇಲ್ಮೈ, ಮೇಲೆ ನಾವು ಹುಲ್ಲಿನ ಒಂದು
    ದಪ್ಪವಾದ ಪದರವನ್ನು ಹರಡುತೇವೆ,
  • 6:02 - 6:04
    ಆಗ ಹೊರಗೆ ಬಿಸಿ ಇದರೂ
    ಮಣ್ಣು ತೇವಾಗಿರುತ್ತದೆ.
  • 6:04 - 6:09
    ಯಾವಾಗ ತಣ್ಣಗಿರುವುದೋ, ಆಗ ಹಿಮ ರಚನೆ
    ಹುಲ್ಲಿನ ಮೇಲೆ ಮಾತ್ರ ನಡೆಯುತ್ತದೆ,
  • 6:10 - 6:13
    ಹೀಗೆ ಹೊರಗೆ ಘನೀಕರಿಸುತಿದ್ದರೂ
    ಮಣ್ಣು ಇನ್ನೂ ಉಸಿರಾಡುವುದು
  • 6:14 - 6:16
    ಈ ಮಣ್ಣು ತುಂಬಾ ಮೃದುವಾಗಿರುವುದು -
  • 6:16 - 6:21
    ಬೇರುಗಳ ಮಣ್ಣನು ಸುಲಭವಾಗಿ ವೇಗವಾಗಿ
    ಇರಿಕೊಂಡು ಹೋಗುವಂತಹ ಮೃದು.
  • 6:22 - 6:24
    ಆರಂಭದಲ್ಲಿ, ಅರಣ್ಯ ಬೆಳೆಯುತ್ತಿರುವಂತೆ ಕಾಣದು
  • 6:24 - 6:26
    ಆದರೆ ಅದು ಮೇಲ್ಮೈಅಡಿಯಲ್ಲಿ ಬೆಳೆಯುತ್ತಿರುತದೆ.
  • 6:26 - 6:28
    ಮೊದಲ ಮೂರು ತಿಂಗಳುಗಳಲ್ಲಿ,
  • 6:28 - 6:30
    ಬೇರುಗಳು ಒಂದು ಮೀಟರ್ ಆಳ ತಲುಪುತ್ತವೆ
  • 6:31 - 6:33
    ಈ ಬೇರುಗಳು ಒಂದು ಜಾಲ ರಚಿಸಿ,
  • 6:33 - 6:34
    ಮಣ್ಣನು ಬಿಗಿಯಾಗ ಹಿಡಿದುಕೊಳ್ಳುವೆವು.
  • 6:34 - 6:38
    ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳು ಬೇರುಗಳ
    ಈ ಜಾಲಬಂಧ ಉದ್ದಕ್ಕೂ ವಾಸಿಸುತವೆ.
  • 6:39 - 6:42
    ಒಂದು ವೇಳೆ ಮರದ ನೆರೆಹೊರೆಯಲ್ಲಿ
    ಪೌಷ್ಟಿಕಾಂಶ ಲಭ್ಯವಿಲ್ಲದಲ್ಲಿ,
  • 6:42 - 6:45
    ಈ ಸೂಕ್ಷ್ಮಾಣು ಜೀವಿಗಳು ಮರಕ್ಕೆ
    ಪೋಷಣೆ ತರುವುವು
  • 6:46 - 6:47
    ಮಳೆಯಾದಾಗೆಲ್ಲ,
  • 6:48 - 6:49
    ಮನಮೋಹಕವಾಗಿ,
  • 6:49 - 6:51
    ಅಣಬೆಗಳು ಒಂದು ರಾತ್ರಿಯ
    ವೇಳೆಯಲ್ಲಿ ಕಾಣಿಸಿಕೊಳ್ಳುತ್ತವೆ.
  • 6:51 - 6:55
    ಇದರ ಅರ್ಥ ಕೆಳಗಿನ ಮಣ್ಣು ಆರೋಗ್ಯಕರ
    ಶಿಲೀಂಧ್ರ ಜಾಲವನ್ನು ಹೊಂದಿದೆಯಂದು.
  • 6:55 - 6:57
    ಈ ಬೇರುಗಳು ಒಮ್ಮೆ ಸ್ಥಾಪಿಸಲಾದರೆ,
  • 6:57 - 6:59
    ಮೇಲ್ಪದರದ ಮೇಲೆ ಅರಣ್ಯ ಬೆಳೆಯ ಆರಂಭವಾಗುತ್ತದೆ.
  • 7:00 - 7:04
    ಅರಣ್ಯ ಬೆಳೆದಂತೆ ನಾವು ಅದಕ್ಕೆ ನೀರುಣಿಸುತ್ತೇವೆ
  • 7:04 - 7:08
    ಮುಂದಿನ ಎರಡು ಮೂರು ವರ್ಷಗಳಿಗೆ,
    ನಾವು ಅರಣ್ಯಕ್ಕೆ ನೀರುಣಿಸುತ್ತೇವೆ.
  • 7:09 - 7:14
    ನಾವು ಎಲ್ಲಾ ನೀರು ಮತ್ತು ಮಣ್ಣಿನ ಪೋಷಣೆ
    ನಮ್ಮ ಮರಗಳಿಗೆ ಇರಿಸಿಕೊಳ್ಳಲು ಬಯಸುತ್ತೀವಿ,
  • 7:14 - 7:17
    ಅದಕ್ಕೆ ನಾವು ನೆಲದ ಮೇಲೆ ಬೆಳೆಯುತ್ತಿರುವ
    ಕಳೆಗಳನ್ನು ತೆಗೆಯುತ್ತೆವೆ.
  • 7:17 - 7:20
    ಈ ಅರಣ್ಯ ಬೆಳೆದಂತೆ, ಅದು ಸೂರ್ಯನ
    ಬೆಳಕನ್ನು ಹಾದಿಕಟ್ಟುತದೆ.
  • 7:21 - 7:23
    ಕಟ್ಟಕಡೆಗೆ, ಅರಣ್ಯ ಎಷ್ಟು
    ಸಾಂದ್ರಗೊಳ್ಳುತ್ತದೆಯಂದರೆ
  • 7:23 - 7:26
    ಇನ್ನು ಮುಂದೆ ಸೂರ್ಯನ ಬೆಳಕು
    ನೆಲವನ್ನು ತಲುಪಲು ಸಾಧ್ಯವಿಲ್ಲ.
  • 7:26 - 7:29
    ಕಳೆ ಈಗ ಬೆಳೆಯಲು ಸಾಧ್ಯವಿಲ್ಲ,
    ಯಾಕೆ೦ದರೆ ಅವಕು ಸೂರ್ಯನ ಬೆಳಕು ಬೇಕಾಗುತ್ತದೆ.
  • 7:30 - 7:31
    ಈ ಹಂತದಲ್ಲಿ,
  • 7:31 - 7:35
    ಅರಣ್ಯದ ಮೇಲೆ ಬೀಳುವ ಪ್ರತಿ ಒಂದು ನೀರಿನ ಹನಿ
  • 7:35 - 7:37
    ಆವಿಯಾಗಿ ವಾತಾವರಣಕ್ಕೆ ಹಿಂತಿರುಗುವುದಿಲ್ಲ
  • 7:37 - 7:40
    ಈ ದಟ್ಟವಾದ ಅರಣ್ಯ ತೇವಭರಿತ
    ಗಾಳಿಯನ್ನು ಘನೀಕರಿಸಿ
  • 7:40 - 7:42
    ಅದರ ತೇವಾಂಶ ಉಳಿಸಿಕೊಳ್ಳುತ್ತದೆ.
  • 7:43 - 7:47
    ನಾವು ಕ್ರಮೇಣ ಅರಣ್ಯಕ್ಕೆ ನೀರುಣಿಸುವುದನ್ನು
    ಕಡಿಮೆ ಮಾಡಿ, ಕಟ್ಟಕಡೆಗೆ ನಿಲ್ಲಿಸುತ್ತೇವೆ.
  • 7:47 - 7:49
    ಮತ್ತು ನೀರಿಲ್ಲದೆ ಸಹ,
  • 7:49 - 7:53
    ಅರಣ್ಯದ ನೆಲೆ ತೇವಾಂಶವುಳ್ಳ ಆಗಿರುತ್ತದೆ
    ಮತ್ತು ಕೆಲವೊಮ್ಮೆ ಕತ್ತಲೆಮಯವಾಗಿ.
  • 7:54 - 7:57
    ಈಗ, ಒಂದು ಎಲೆ
    ಈ ಅರಣ್ಯದ ನೆಲೆ ಮೇಲೆ ಬಿದರೆ,
  • 7:57 - 8:00
    ತಕ್ಷಣ ಕೊಳೆಯಲು ಆರಂಭವಾಗುತ್ತದೆ.
  • 8:00 - 8:04
    ಈ ಕೊಳೆತ ಜೀವರಾಶಿ
    ಮಣ್ಣುಗೊಬ್ಬರಕ್ಕೆ ರೂಪಗೊಳ್ಳುತ್ತದೆ,
  • 8:04 - 8:05
    ಇದು ಅರಣ್ಯದ ಆಹಾರ.
  • 8:06 - 8:07
    ಅರಣ್ಯ ಬೆಳೆದಂತೆ,
  • 8:07 - 8:09
    ಹೆಚ್ಚು ಎಲೆಗಳು ಮೇಲ್ಪದರ ಮೇಲೆ ಬೀಳುತ್ತವೆ--
  • 8:09 - 8:11
    ಇದರ ಅರ್ಥ ಹೆಚ್ಚು ಮಣ್ಣುಗೊಬ್ಬರ
    ಉತ್ಪಾದಿಸಲಾಗುತ್ತದೆ,
  • 8:11 - 8:14
    ಹೀಗೆಂದರೆ ಹೆಚ್ಚು ಆಹಾರ,
    ಕಾಡು ಇನ್ನೂ ದೊಡ್ಡದಾಗಿ ಬೆಳೆಯುತ್ತವೆ.
  • 8:14 - 8:17
    ಮತ್ತು ಈ ಅರಣ್ಯ ಸ್ಫೋಟಕವಾಗಿ ಬೆಳೆಯುತ್ತದೆ.
  • 8:18 - 8:19
    ಒಮ್ಮೆ ಪ್ರತಿಷ್ಠಿವಾದರೆ,
  • 8:19 - 8:24
    ಈ ಕಾಡುಗಳು ತಾವೇ ಮತ್ತೆ ಮತ್ತೆ
    ಪುನರ್ಜನ್ಮ ಪಡೆಯುತವೇ --
  • 8:24 - 8:25
    ಬಹುಶಃ ಶಾಶ್ವತವಾಗಿ.
  • 8:26 - 8:29
    ಈ ರೀತಿಯ ನೈಸರ್ಗಿಕ ಕಾಡಿನಲ್ಲಿ,
  • 8:29 - 8:31
    ಯಾವುದೇ ನಿರ್ವಹಣೆ ಇಲ್ಲದಿರುವುದೇ
    ಉತ್ತಮ ನಿರ್ವಹಣೆ.
  • 8:32 - 8:34
    ಇದು ಕಾಡಿನ ಒಂದು ಸಣ್ಣ ವಿನೋದ ಕೂಟ.
  • 8:34 - 8:36
    (ನಗೆ)
  • 8:37 - 8:39
    ಈ ಅರಣ್ಯ ಸಾಮೂಹಿಕವಾಗಿ ಬೆಳೆಯುತ್ತದೆ.
  • 8:40 - 8:41
    ಒಂದು ಪಕ್ಷ ಇವೇ ಮರಗಳು -
  • 8:41 - 8:42
    ಒಂದೇ ಜಾತಿಯದಾಗಿ ಇದ್ದು -
  • 8:42 - 8:45
    ಸ್ವತಂತ್ರವಾಗಿ ನೆಡಲಾಗಿದೆರೆ,
  • 8:45 - 8:46
    ಇದು ಇಷ್ಟು ವೇಗವಾಗಿ ಬೆಳೆಯುತಿರಲ್ಲಿಲ.
  • 8:47 - 8:50
    ಹೀಗೆಯೇ ನಾವು ೧೦೦ ವರ್ಷದ ಅರಣ್ಯವನ್ನು
  • 8:50 - 8:52
    ಕೇವಲ ೧೦ ವರ್ಷಗಳಲ್ಲಿ ರಚಿಸುತ್ತೇವೆ.
  • 8:52 - 8:53
    ತುಂಬ ಧನ್ಯವಾದಗಳು.
  • 8:53 - 8:59
    (ಚಪ್ಪಾಳೆ)
Title:
ನಿಮ್ಮ ಹಿತ್ತಲಿನಲ್ಲಿ ಅರಣ್ಯವನ್ನು ಹೇಗೆ ಬೆಳೆಯುವುದು?
Speaker:
ಶುಭೇಂದು ಶರ್ಮಾ
Description:

ಅರಣ್ಯಗಳು ಮಾನವ ಜೀವನದಿಂದ ಏಕಾಂತವಾಗಿ ದೂರದ ಗುಡ್ಡಗಾಡಗಿರುವುದು ಬೇಕಾಗಿಲ್ಲ. ಬದಲಾಗಿ, ನಾವು ಅವುಗಳನ್ನು ನಾವು ಇರೋ ಕಡೆಯೆ ಬೆಳೆಯಬಹುದು - ನಗರಗಳಲ್ಲಿ ಸಹ. ಪರಿಸರ ಉದ್ಯಮಿ ಮತ್ತು ಟೆಡ್ ಫೆಲೋ ಶುಭೇಂದು ಶರ್ಮ ಅತಿ ಗಾಢವಾದ,ಜೈವಿಕ ವೈವಿಧ್ಯಮಯವಾದ ಸಣ್ಣ ಸ್ಥಳೀಯ ಜಾತಿಗಳ ಅರಣ್ಯಗಳನ್ನು - ನಗರ ಪ್ರದೇಶಗಳಲ್ಲಿ ಬೆಳೆಯಲು, ಮಣ್ಣಿನ ಎಂಜಿನಿಯರಿಂಗ್, ಸೂಕ್ಷ್ಮಾಣು ಜೀವಿಗಳ ಮತ್ತು ಜೀವರಾಶಿ ಮೂಲಕ ನೈಸರ್ಗಿಕ ಬೆಳವಣಿಗೆ ಪ್ರಕ್ರಿಯೆ ಶುರುಮಾಡಿದರು. ಅವರು ಕೇವಲ ೧೦ ವರ್ಷಗಳಲ್ಲಿ ೧೦೦ ವರ್ಷದ ಅರಣ್ಯ ಹೇಗೆ ಬೆಳೆಯುವುದೆಂದು ವಿವರಿಸುವುದನ್ನು ಕೇಳಿ, ನೀವು ಕೂಡ ಈ ಪುಟ್ಟ ಕಾಡಿನ ವಿನೋಧ ಕೂಟದಲ್ಲಿ ಹೇಗೆ ಸೇರುವುಬಹುದು ಎಂದು ತಿಳಿಯಿರಿ.

more » « less
Video Language:
English
Team:
closed TED
Project:
TEDTalks
Duration:
09:11

Kannada subtitles

Revisions