WEBVTT 00:00:00.000 --> 00:00:03.000 ನಾನು ಸ್ಕಾಟ್ ಲ್ಯಾಂಡ್ ಗೆ ಬಾರೋ ಹಿಂದಿನ ರಾತ್ರಿ 00:00:03.000 --> 00:00:06.000 ಶಾಂಗಯ್ ನಲ್ಲಿ ನಡೆದ "ಚೈನಾ ಹ್ಯಾಸ್ ಗಾಟ್ ದ ಟ್ಯಾಲೆಂಟ್" 00:00:06.000 --> 00:00:09.000 ಕಾರ್ಯಕ್ರಮದ ಫೈನಲ್ ಎಪಿಸೋಡ್ ಗೆ ನಿರೂಪಕಿಯಾಗಿ ಹೋಗಬೇಕಾಗಿತ್ತು 00:00:09.000 --> 00:00:13.000 ಸುಮಾರು ೮೦೦೦೦ ಜನ ಸೇರಿದ್ದ ಆ ಸ್ಟೇಡಿಯಂನಲ್ಲಿ 00:00:13.000 --> 00:00:16.000 ಯಾರು ಪರ್ಫಾರ್ಮ್ ಮಾಡ್ತಾಯಿದ್ರು ಗೊತ್ತಾ ..? 00:00:16.000 --> 00:00:19.000 ಸುಸನ್ ಬಾಯ್ಲೇ 00:00:19.000 --> 00:00:23.000 ನಾನು ಅವಳಿಗೆ ನಾಳೆ ಸ್ಕಾಟ್ ಲ್ಯಾಂಡ್ ಗೆ ಹೋಗ್ತಾಯಿರೋ ವಿಷ್ಯಾ ಹೇಳಿದೆ 00:00:23.000 --> 00:00:25.000 ತುಂಬಾ ಚೆನ್ನಾಗಿ ಹಾಡಿದಳು. 00:00:25.000 --> 00:00:29.000 ಜೊತೆಗೆ ಚೈನಿಸ್ ನಲ್ಲಿ ಒಂದೆರಡು ಮಾತೂ ಆಡಿದಳು. 00:00:29.000 --> 00:00:32.000 ಚೈನಿಸ್ 00:00:32.000 --> 00:00:34.000 ಹಲೋ .. ಥಾಂಕ್ಯೂ ಅನ್ನೋ ಹಾಗೆ 00:00:34.000 --> 00:00:36.000 ತುಂಬಾ ಸರಳವಾಗ ಪದಗಳೇನು ಅಲ್ಲ ಅವು. 00:00:36.000 --> 00:00:38.000 ಆಕೆ ಹೇಳಿದ್ದು "ಸಣ್ಣ ಈರುಳ್ಳಿ ಉಚಿತ" ಅಂತ. 00:00:38.000 --> 00:00:41.000 ಯಾಕೆ ಹಾಗೆ ಹೇಳಿರಬಹುದು ..? 00:00:41.000 --> 00:00:44.000 ಯಾಕೆ ಅಂದರೆ .. ಅ ಮಾತನ್ನ 00:00:44.000 --> 00:00:47.000 ಸುಸಾನ್ ನ ಜೊತೆಗಾತಿ ಹೇಳಿಕೋಟ್ಟಿದ್ದಳಂತೆ, 00:00:47.000 --> 00:00:49.000 ಸುಮಾರು ೫೦ ವರ್ಷದ ಆಕೆ, 00:00:49.000 --> 00:00:51.000 ಶಾಂಗಯ್ ನಲ್ಲಿ ತರಕಾರಿ ಅಂಗಡಿ ಇಟ್ಕೊಂಡಿದ್ದಳಂತೆ, 00:00:51.000 --> 00:00:54.000 ಆಕೆಗೆ ಆಪ್ರಾ ಹಾಡೋ ಆಸೆ 00:00:54.000 --> 00:00:56.000 ಆದರೆ ಅರ್ಥ ಆಗ್ತಾಯಿರಲಿಲ್ಲ, 00:00:56.000 --> 00:00:58.000 ಅದಕ್ಕೆ ಆಕೆ ಇಂಗ್ಲೀಷ್, ಫ್ರೆಂಚ್ ಅಥವಾ ಇಟಾಲಿಯನ್ ಯಾವುದಾದರು ಹಾಡು ಆಗಿರಲಿ, 00:00:58.000 --> 00:01:00.000 ಅದಕ್ಕೇನೆ ಚೈನಿಸ್ ಪದಗಳನ್ನ ಹಾಕಿ ಹಾಡ್ತಾಯಿದ್ಲಂತೆ. 00:01:00.000 --> 00:01:02.000 ಕೆಲವೊಮ್ಮೆ ಹಾಡಿನ ಮಧ್ಯ ತರಕಾರಿಗಳ ಹೆಸರನ್ನು ಸೇರಿಸಿಬಿಡ್ತಿದ್ಳಂತೆ . 00:01:02.000 --> 00:01:04.000 .... 00:01:04.000 --> 00:01:07.000 ಸುಸಾನ್ ಆ ದಿನ ಸ್ಟೇಡಿಯಂನಲ್ಲಿ 00:01:07.000 --> 00:01:09.000 ತನ್ನ ಹಾಡಿನ ಕೊನೆಯಲ್ಲಿ ಇದೇ ಸಾಲುಗಳನ್ನ ಹಾಡಿದಳು . 00:01:09.000 --> 00:01:12.000 "ಸಣ್ಣ ಈರುಳ್ಳಿ ಉಚಿತ" 00:01:12.000 --> 00:01:15.000 ಸುಸಾನ್ ಜೊತೆಯಲ್ಲೇ 00:01:15.000 --> 00:01:18.000 ಅಲ್ಲಿದ್ದ ೮೦೦೦೦ ಜನರು ಹಾಡಿದರು 00:01:18.000 --> 00:01:21.000 ತುಂಬಾ ಚೆನ್ನಾಗಿತ್ತು ಬಿಡಿ ... NOTE Paragraph 00:01:21.000 --> 00:01:24.000 ನಮಗೆ ಗೊತ್ತು ಸುಸಾನ್ ಬಾಯ್ಲೇ 00:01:24.000 --> 00:01:27.000 ಹಾಗು ಆ ತರಕಾರಿ ಅಂಗಡಿಯವಳು 00:01:27.000 --> 00:01:29.000 ಇಬ್ಬರು ಎಲ್ಲೆಲ್ಲಿಂದಲೋ ಬಂದವರು 00:01:29.000 --> 00:01:31.000 ಅವರಿಬ್ಬರೂ ಈ ಮಟ್ಟಕ್ಕೆ ಪ್ರಖ್ಯಾತರಾಗುತ್ತಾರೆ ಎಂದು ಯಾರು ಊಹಿಸಿದ್ದರು 00:01:31.000 --> 00:01:34.000 ಅದು ಈ ಮನೋರಂಜನೆಯ ಮಾಧ್ಯಮದಲ್ಲಿ 00:01:34.000 --> 00:01:37.000 ಆದರು ಅವರ ಧೈರ್ಯ ಹಾಗು ಪ್ರತಿಭೆ ಅವರನ್ನು ಅಲ್ಲಿಗೆ ಕರೆತಂತು 00:01:37.000 --> 00:01:40.000 ಹಾಗಾಗಿ ಆ ಕಾರ್ಯಕ್ರಮವು 00:01:40.000 --> 00:01:42.000 ಇಬ್ಬರಿಗೂ ವೇದಿಕೆಯನ್ನು ಕಲ್ಪಿಸಿತು 00:01:42.000 --> 00:01:45.000 ಅವರಿಬ್ಬರ ಕನಸು ಸಾಕಾರವಾಯ್ತು 00:01:45.000 --> 00:01:49.000 ಬೇರೆ ಬೇರೆ ಕಡೆಯವರಾಗಿರುವುದು ಸಮಸ್ಯೆಯೇನು ಅಲ್ಲ 00:01:49.000 --> 00:01:51.000 ನಾವೆಲ್ಲರೂ ಬೇರೆ ಬೇರೆಯೇ 00:01:51.000 --> 00:01:53.000 ಬೇರೆ ಮೂಲಗಳಿಂದ ಬಂದವರೇ 00:01:53.000 --> 00:01:55.000 ಅದು ಒಂಥರಾ ಒಳ್ಳೆಯದೇ 00:01:55.000 --> 00:01:58.000 ಏಕೆಂದರೆ ವಿವಿಧ ದೃಷ್ಟಿಕೋನಗಳು ಬರುತ್ತವೆ 00:01:58.000 --> 00:02:01.000 ನೀವೇ ಬೇರೆ ವಿಧದಲ್ಲಿ ಯೋಚಿಸಿ , ಹೊಸದನ್ನು ನೀಡಬಹುದು NOTE Paragraph 00:02:01.000 --> 00:02:03.000 ನನ್ನ ಸಮಕಾಲಿನರೆ ಭಾಗ್ಯವಂತರು 00:02:03.000 --> 00:02:05.000 ಚೀನಾವನ್ನು ಬದಲಾಯಿಸುವ 00:02:05.000 --> 00:02:08.000 ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದಾರೆ 00:02:08.000 --> 00:02:10.000 ಅದು ಅನೇಕ ದೊಡ್ಡ ಬದಲಾವಣೆಗಳನ್ನು ತಂದಿದೆ 00:02:10.000 --> 00:02:13.000 ಕಳೆದ ೨೦-೩೦ ವರ್ಷಗಳಲ್ಲಿ 00:02:13.000 --> 00:02:16.000 ನನಗೆ ನೆನಪಿರುವಂತೆ ೧೯೯೦ ರಲ್ಲಿ 00:02:16.000 --> 00:02:18.000 ನಾನು ಪದವಿ ಪಡೆದು 00:02:18.000 --> 00:02:21.000 ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದೆ 00:02:21.000 --> 00:02:23.000 ಅದೊಂದು ಬಿಜಿಂಗ್ ನ ಫೈವ್ ಸ್ಟಾರ್ ಹೋಟೆಲ್ 00:02:23.000 --> 00:02:27.000 ಗ್ರೇಟ್ ವಾಲ್ ಶೆಟ್ರೋನ್ ಅಂತಾ , ಈಗಲು ಇದೆ 00:02:27.000 --> 00:02:29.000 ಅರ್ಧ ಗಂಟೆಯ ತನಕ ನನ್ನನ್ನು ಪ್ರಶ್ನೆಸಿದ 00:02:29.000 --> 00:02:31.000 ಜಪಾನಿ ಮ್ಯಾನೇಜರ್ ಒಬ್ಬ 00:02:31.000 --> 00:02:33.000 ಕೊನೆಗೆ ಹೇಳಿದ 00:02:33.000 --> 00:02:35.000 ಮಿಸ್. ಯಂಗ್ 00:02:35.000 --> 00:02:38.000 ನೀವು ಏನಾದರು ಕೆಳುವುದಿದೆಯೇ 00:02:38.000 --> 00:02:41.000 ನಾನು ಸ್ವಲ್ಪ ಧೈರ್ಯ ಮಾಡಿ 00:02:41.000 --> 00:02:43.000 "ಹೌದು, 00:02:43.000 --> 00:02:46.000 ನೀವು ಇಲ್ಲಿ ಏನನ್ನು ಮಾರಾಟ ಮಾಡುತ್ತಿರಿ " ಅಂದೇ 00:02:46.000 --> 00:02:48.000 ಫೈವ್ ಸ್ಟಾರ್ ಹೋಟೆಲ್ ನಲ್ಲಿ 00:02:48.000 --> 00:02:50.000 ಸೇಲ್ಸ್ ವಿಭಾಗದ ಕೆಲಸ ಏನು ಎಂದು ನನಗೆ ಅರಿವೇ ಇರಲಿಲ್ಲ 00:02:50.000 --> 00:02:52.000 ಜೀವನದಲ್ಲಿ ಮೊದಲ ಬಾರಿಗೆ 00:02:52.000 --> 00:02:54.000 ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿದ್ದೆ ಅಂದು NOTE Paragraph 00:02:54.000 --> 00:02:56.000 ಆ ದಿನಗಳಲ್ಲಿಯೇ 00:02:56.000 --> 00:02:59.000 ಒಂದು ಆಡಿಶನ್ ನಡಿಯುತ್ತಿತ್ತು 00:02:59.000 --> 00:03:01.000 ಅದೊಂದು ಓಪನ್ ಆಡಿಶನ್ 00:03:01.000 --> 00:03:04.000 ಚೀನಾದ ದೂರದರ್ಶನ ನಡೆಸುತ್ತಿದ್ದ ಕಾರ್ಯಕ್ರಮ 00:03:04.000 --> 00:03:07.000 ಸುಮಾರು ಸಾವಿರ ಹುಡುಗಿಯರಿದ್ದರು 00:03:07.000 --> 00:03:09.000 ಅಲ್ಲಿನ ನಿರ್ಮಾಪಕ ಹೇಳಿದ .. 00:03:09.000 --> 00:03:11.000 "ನಾವು, ನೋಡಲು ಸುಂದರವಾಗಿರುವ 00:03:11.000 --> 00:03:14.000 ಹೊಸ ಅಭ್ಯರ್ಥಿಗಳನ್ನು ಆರಿಸುತ್ತಿದ್ದೇವೆ" ಎಂದು 00:03:14.000 --> 00:03:17.000 ನನ್ನ ಸರದಿಯು ಬಂದಾಗ, ಕೇಳಿಯೇ ಬಿಟ್ಟೆ 00:03:17.000 --> 00:03:20.000 "ಯಾವಾಗಲು ಟಿವಿಯಲ್ಲಿ ಬರುವ ಹುಡುಗಿಯರು 00:03:20.000 --> 00:03:23.000 ಸುಂದರವಾಗಿ, ಮುದ್ದಾಗಿ ಹಾಗು 00:03:23.000 --> 00:03:26.000 .. ಸಹಕರಿಸುವವರೇ ಆಗಿರಬೇಕೆ ..? 00:03:26.000 --> 00:03:28.000 ಅವರದೇ ವಿಶೇಷತೆ ಇದ್ದು 00:03:28.000 --> 00:03:30.000 ಅವರದೇ ವಿಧವಾದ ದನಿಯಿರಬಾರದೆ..? 00:03:30.000 --> 00:03:34.000 ಅವರು ಕೋಪಗೊಂಡಿರಬಹುದು ಎಂದುಕೊಂಡೆ 00:03:34.000 --> 00:03:38.000 ಆದರೆ, ನನ್ನ ಮಾತುಗಳು ಆವರಿಗೆ ಒಪ್ಪಿದ್ದವು 00:03:38.000 --> 00:03:40.000 ನಾನು ಎರಡನೇ ಸುತ್ತಿಗೆ ಅಯ್ಕೆಯಾಗಿದ್ದೆ 00:03:40.000 --> 00:03:42.000 ನಂತರ ೩-೪ ನೆ ಸುತ್ತಿಗೆ 00:03:42.000 --> 00:03:44.000 ಹಾಗೆ ಏಳು ಸುತ್ತಿನ ನಂತರ 00:03:44.000 --> 00:03:47.000 ಅಲ್ಲಿ ಆಯ್ಕೆ ಆದ ಏಕೈಕ ಹುಡುಗಿ ನಾನೇ .. 00:03:47.000 --> 00:03:50.000 ನಾನು ಪ್ರಮುಖ ಕಾರ್ಯಕ್ರಮವೊಂದರ ನಿರುಪಕಿಯಾದೆ 00:03:50.000 --> 00:03:52.000 ನಿಜ ಹೇಳಬೇಕೆಂದರೆ 00:03:52.000 --> 00:03:54.000 ಮೊದಲಬಾರಿಗೆ ಚೈನಾ ಟಿವಿಯಲ್ಲಿ 00:03:54.000 --> 00:03:56.000 ನಿರೂಪಕಿಯಾಗಿ ನನ್ನ ಸ್ವತಃ ಮಾತುಗಳನ್ನಾಡಲು 00:03:56.000 --> 00:03:58.000 ಅವಕಾಶ ಮಾಡಿಕೊಟ್ಟಿದ್ದರು. 00:03:58.000 --> 00:04:01.000 ಯಾವುದೇ ಅಭ್ಯಂತರವಿಲ್ಲದೆ. 00:04:01.000 --> 00:04:05.000 .... 00:04:05.000 --> 00:04:07.000 ಆಗ ನನ್ನ ಕಾರ್ಯಕ್ರಮಗಳಲ್ಲಿ 00:04:07.000 --> 00:04:11.000 ೨೦೦-೩೦೦ ಜನ ಇರುತ್ತಿದ್ದರು. NOTE Paragraph 00:04:11.000 --> 00:04:13.000 ಕೆಲ ವರ್ಷಗಳ ನಂತರ , 00:04:13.000 --> 00:04:16.000 ನಾನು ಅಮೇರಿಕಾ ಹಾಗು ಕೊಲಂಬಿಯಾದಲ್ಲಿ 00:04:16.000 --> 00:04:18.000 ಉನ್ನತ ಪದವಿಗಾಗಿ ಹೋದೆ. 00:04:18.000 --> 00:04:20.000 ನಂತರ ನನ್ನದೇ ಒಂದು ಕಂಪನಿಯನ್ನು ಶುರು ಮಾಡಿದೆ. 00:04:20.000 --> 00:04:23.000 ಇದನ್ನು ನಾನು ಎಂದು 00:04:23.000 --> 00:04:25.000 ನೆನೆಸಿರಲೇ ಇರಲಿಲ್ಲ. 00:04:25.000 --> 00:04:27.000 ಈಗ ಅಲ್ಲಿ ತುಂಬಾ ಕಾರ್ಯಕ್ರಮಗಳು ನಡೆಯುತ್ತೆ. 00:04:27.000 --> 00:04:30.000 ನಾನು ಸಾವಿರಾರು ಜನರನ್ನ ಸಂದರ್ಶನ ಮಾಡಿದ್ದೇನೆ. 00:04:30.000 --> 00:04:33.000 ಕೆಲವೊಮ್ಮೆ ಯುವ ಜನರು ಬಂದು ನನ್ನ್ನಲ್ಲಿ ಹೇಳುತ್ತಾರೆ. 00:04:33.000 --> 00:04:35.000 "ಲಾನ್, ನೀವು ನನ್ನ ಜೀವನವನ್ನು ಬದಲಾಯಿಸಿದಿರಿ" ಎಂದು 00:04:35.000 --> 00:04:37.000 ಆಗ ತುಂಬಾ ಖುಷಿಯಾಗುತ್ತದೆ 00:04:37.000 --> 00:04:39.000 ಆದರೆ, ನಾವು ಸಹ ಭಾಗ್ಯವಂತರೆ.. 00:04:39.000 --> 00:04:42.000 ಬದಲಾಗುತ್ತಿರುವ ನಮ್ಮ ದೇಶವನ್ನು ನೋಡಲು. 00:04:42.000 --> 00:04:46.000 ಮತ್ತೆ ನಾನು ಚೈನಾ ಒಲಂಪಿಕ್ಸ್ ನಲ್ಲಿ 00:04:46.000 --> 00:04:48.000 ಬಿಜಿಂಗ್ ನ ಶಾಂಗೈ ಎಕ್ಸ್ಪೋ ವನ್ನು ಪ್ರತಿನಿಧಿಸಿದ್ದೆ. 00:04:48.000 --> 00:04:50.000 ಚೈನಾ ದೇಶವು ಇಡಿ ವಿಶ್ವದೊಂದಿಗೆ 00:04:50.000 --> 00:04:52.000 ಬೆರೆತು ಕಲೆತದ್ದನ್ನು ಕಂಡೆ. 00:04:52.000 --> 00:04:55.000 ನಂತರ ನನಗೆ ಅನ್ನಿಸತೊಡಗಿತು, 00:04:55.000 --> 00:04:59.000 ಇಂದಿನ ಯುವ ಜನಾಂಗ ಎತ್ತ ಸಾಗುತ್ತಿದೆ..? 00:04:59.000 --> 00:05:01.000 ಅವರ ವಿಶೇಷತೆಯೇನು .. 00:05:01.000 --> 00:05:03.000 ಅವರು ತಮ್ಮ ದೇಶಕ್ಕಾಗಿ ಹೇಗೆ ಹೊಸದೇನಾದರೂ 00:05:03.000 --> 00:05:05.000 ಮಾಡಬಲ್ಲರು .. 00:05:05.000 --> 00:05:08.000 ಅಥವಾ ಇಡಿ ವಿಶ್ವಕಾಗಿ.. NOTE Paragraph 00:05:08.000 --> 00:05:10.000 ಹಾಗಾಗಿ ನಾನು ಇಂದು ಯುವ ಪೀಳಿಗೆಯ ಬಗ್ಗೆ 00:05:10.000 --> 00:05:13.000 ಈ ವೇದಿಕೆಯಲ್ಲಿ ಮಾತಾಡಲಿದ್ದಿನಿ. 00:05:13.000 --> 00:05:16.000 ಮೊದಲಿಗೆ, ಯುವ ಪೀಳಿಗೆ ಅಂದರೆ ಯಾರು ? ಹೇಗಿದ್ದಾರೆ..? 00:05:16.000 --> 00:05:18.000 ಈ ಹುಡುಗಿ ಹೆಸರು ಗು ಮಿಯಾಮಿ 00:05:18.000 --> 00:05:20.000 ೨೦ ವರ್ಷದ ಮುದ್ದು ಹುಡುಗಿ. 00:05:20.000 --> 00:05:23.000 ಇತ್ತೀಚಿಗೆ ಒಮ್ಮೆ ತನ್ನ ಮೈಕ್ರೋಬ್ಲಾಗ್ ನಲ್ಲಿ ಆಕೆ 00:05:23.000 --> 00:05:25.000 ತಾನು ಉಪಯೋಗಿಸುವ ದುಬಾರಿ ಬ್ಯಾಗ್,ಕಾರ್, ಬಟ್ಟೆಗಳು ಎಲ್ಲವನ್ನು 00:05:25.000 --> 00:05:27.000 ತೋರಿಸಿದಳು. 00:05:27.000 --> 00:05:29.000 ...... 00:05:29.000 --> 00:05:33.000 ಆಕೆ ತಾನು ಚೇಂಬರ್ ಆಫ್ ಕಾಮರ್ಸ್ ನಲ್ಲಿ 00:05:33.000 --> 00:05:36.000 ರೆಡ್ ಕ್ರಾಸ್ ನ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಳು. 00:05:36.000 --> 00:05:38.000 ಆಕೆಗೆ ತಾನು ಮಾಡಿದ 00:05:38.000 --> 00:05:40.000 ಸೂಕ್ಷ್ಮವಾದ ತಪ್ಪು ತಿಳಿದಿರಲಿಲ್ಲ. 00:05:40.000 --> 00:05:42.000 ಇಡೀ ದೇಶದಲ್ಲೇ ಆಕೆಯ ಬಗ್ಗೆ ಪ್ರಶ್ನೆಗಳು ಎದ್ದವು. 00:05:42.000 --> 00:05:44.000 ರೆಡ್ ಕ್ರಾಸ್ ನ ನಂಬಿಕೆಯ ಮೇಲೆಯೇ 00:05:44.000 --> 00:05:47.000 ಉಹಾಪೂಹಗಳೆದ್ದವು. 00:05:47.000 --> 00:05:50.000 ಈ ಸುದ್ದಿ ಎಷ್ಟು ದೊಡ್ಡದಾಯಿತು ಎಂದರೆ, 00:05:50.000 --> 00:05:52.000 ರೆಡ್ ಕ್ರಾಸ್ ಸಂಸ್ಥೆಯೇ ಒಂದು ಪತ್ರಿಕಾ ಘೋಷ್ಟಿ ಕರೆದು 00:05:52.000 --> 00:05:54.000 ಸಮಜಾಯಿಸಿ ನೀಡಬೇಕಾಯಿತು. 00:05:54.000 --> 00:05:56.000 ಇದರ ತನಿಖೆಯು ಇನ್ನು ನಡೆಯುತ್ತಿದೆ. NOTE Paragraph 00:05:56.000 --> 00:05:59.000 ನಂತರ 00:05:59.000 --> 00:06:02.000 ಆಕೆ ಹೇಳಿದಂತೆ ಆಕೆಗೆ ತಾನು ರೆಡ್ ಕ್ರಾಸ್ ನಂತಹ 00:06:02.000 --> 00:06:05.000 ಸಂಸ್ಥೆಯ ಜೊತೆಗೆ ಪರಿಚಯಿಸಿಕೊಳ್ಳುವುದು ಇಷ್ಟ ಇತ್ತು. 00:06:05.000 --> 00:06:07.000 ಹಾಗು ಆಕೆ ದುಬಾರಿ ವಸ್ತುಗಳು 00:06:07.000 --> 00:06:09.000 ಉಡುಗೊರೆಯಾಗಿ 00:06:09.000 --> 00:06:11.000 ಆಕೆಯ ಪ್ರೇಮಿ ಕೊಡಿಸಿದ್ದ. 00:06:11.000 --> 00:06:13.000 ಆತ ಹಿಂದೆ ರೆಡ್ ಕ್ರಾಸ್ ನ 00:06:13.000 --> 00:06:16.000 ಚೇಂಬರ್ ಆಫ್ ಕಾಮರ್ಸ್ ನಲ್ಲಿ ಪ್ರಮುಖ ಸದಸ್ಯನಾಗಿದ್ದ. 00:06:16.000 --> 00:06:19.000 ಇದನ್ನ ವಿವರಿಸೋದು ಸ್ವಲ್ಪ ಕಷ್ಟ. 00:06:19.000 --> 00:06:22.000 ಜನರಂತೂ ಅದನ್ನು ನಂಬಲಿಲ್ಲ . 00:06:22.000 --> 00:06:24.000 ಈಗಲೂ ಅದರ ಬಿಸಿಯಾಡುತ್ತಿದೆ. 00:06:24.000 --> 00:06:27.000 ಇದರಿಂದ ಒಂದಂತು ಸ್ಪಷ್ಟವಾಗುತ್ತಿದೆ, 00:06:27.000 --> 00:06:30.000 ಸರ್ಕಾರಿ ಅನುಧಾನಿತ ಸಂಸ್ಥೆಗಳು 00:06:30.000 --> 00:06:33.000 ಹಿಂದಿನಿಂದ ಪಾರದರ್ಶಕತೆಯಿಂದ ನಡೆದು ಬಂದಿಲ್ಲ. 00:06:33.000 --> 00:06:35.000 ಮತ್ತೆ ಇನ್ನೊಂದು ವಿಷಯವೆಂದರೆ 00:06:35.000 --> 00:06:38.000 ಮೈಕ್ರೋ ಬ್ಲಾಗ್ ನಂತಹ 00:06:38.000 --> 00:06:40.000 ಮಾಧ್ಯಮಗಳಿಂದ ಆಗುವ ತೀವ್ರ ಪರಿಣಾಮ. NOTE Paragraph 00:06:40.000 --> 00:06:43.000 ಮೈಕ್ರೋ ಬ್ಲಾಗ್ ೨೦೧೦ ರಲ್ಲಿ ಅತಿ ಜನಪ್ರಿಯವಾಯ್ತು. 00:06:43.000 --> 00:06:45.000 ಬಳಕೆದಾರರು ಒಂದೇ ವರ್ಷದಲ್ಲಿ ಎರಡರಷ್ಟು ಹೆಚ್ಚಾದರು. 00:06:45.000 --> 00:06:48.000 ಮತ್ತು ಅದರ ಬಳಕೆಯ ಸಮಯ ಮೂರೂ ಪಟ್ಟು ಹೆಚ್ಚಾಯಿತು. 00:06:48.000 --> 00:06:50.000 ಸಿನಾ ಡಾಟ್ ಕಾಂ .. ಇದು ಪ್ರಮುಖ ಪತ್ರಿಕಾ ವೆಬ್ ಸೈಟ್. 00:06:50.000 --> 00:06:54.000 ಇದೊಂದರಲ್ಲೇ ೧೪೦ ಮಿಲಿಯನ್ ಮೈಕ್ರೋ ಬ್ಲಾಗ್ ಬಳಕೆದಾರರಿದ್ದಾರೆ. 00:06:54.000 --> 00:06:56.000 ಟೆನ್ ಸೆಂಟ್ ನಲ್ಲಿ ೨೦೦ ಮಿಲಿಯನ್. 00:06:56.000 --> 00:06:58.000 ಮತ್ತೆ ಅತಿ ಹೆಚ್ಚು ಖ್ಯಾತ ಬ್ಲಾಗರ್ ಅಂದರೆ 00:06:58.000 --> 00:07:00.000 ನಾನಂತೂ ಅಲ್ಲ.. 00:07:00.000 --> 00:07:02.000 ಒಬ್ಬ ಚಿತ್ರ ನಟಿ .. 00:07:02.000 --> 00:07:06.000 ಆಕೆ ೯.೫ ಮಿಲಿಯನ್ ಅಭಿಮಾನಿಗಳಿದ್ದಾರೆ .. 00:07:06.000 --> 00:07:09.000 ಇವರಲ್ಲಿ ಶೇಕಡಾ ೮೦ರಷ್ಟು ಯುವ ಪೀಳಿಗೆಯೇ. 00:07:09.000 --> 00:07:12.000 ಅಂದರೆ ೩೦ಕ್ಕಿಂತ ಕಡಿಮೆ ವಯಸ್ಸಿನವರು. 00:07:12.000 --> 00:07:14.000 ನನಗೆ ಅನಿಸಿದಂತೆ, ಸಾಂಪ್ರದಾಯಿಕ ಮಾಧ್ಯಮಗಳು 00:07:14.000 --> 00:07:17.000 ಸರ್ಕಾರದ ಹತೋಟಿಯಲ್ಲೇ ಇರುವುದರಿಂದ ಹಾಗು 00:07:17.000 --> 00:07:19.000 ಇತರ ಸಾಮಾಜಿಕ ಮಾಧ್ಯಮಗಳು ಮುಕ್ತವಾಗಿ 00:07:19.000 --> 00:07:21.000 ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸುತ್ತಿವೆ. 00:07:21.000 --> 00:07:24.000 ಇಂತಹ ಮುಕ್ತ ಅವಕಾಶಗಳು ಸಿಕ್ಕಾಗ 00:07:24.000 --> 00:07:27.000 ಸಾಮಾನ್ಯವಾಗಿ ಅದರಿಂದ ಹೊರಹೊಮ್ಮುವ ಭಾವನೆಗಳು 00:07:27.000 --> 00:07:30.000 ಅವಸರ, ನೇರ ಹಾಗು ಕೆಲವೊಮ್ಮೆ 00:07:30.000 --> 00:07:32.000 ಆಕ್ರಮಣಕಾರಿಯಾಗಿಯೂ ಇರುತ್ತವೆ. NOTE Paragraph 00:07:32.000 --> 00:07:34.000 ಹಾಗಾಗಿ, ಈ ಮೈಕ್ರೋ ಬ್ಲಾಗ್ ನ ಮೂಲಕ 00:07:34.000 --> 00:07:37.000 ಚೈನಾದ ಯುವಪೀಳಿಗೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. 00:07:37.000 --> 00:07:39.000 ಇವರು ಹೇಗೆ ಭಿನ್ನ ಎನ್ನುವಿರಾ ..? 00:07:39.000 --> 00:07:41.000 ಮೊದಲನೆಯದಾಗಿ, ಅವರೆಲ್ಲಾ ಸುಮಾರು 00:07:41.000 --> 00:07:43.000 ೮೦ ಹಾಗು ೯೦ ರ ದಶಕದಲ್ಲಿ ಜನಿಸಿದವರು. 00:07:43.000 --> 00:07:46.000 ಒಂದೇ ತರಹದ ಕುಟುಂಬ ಕಲ್ಯಾಣ ಖಾಯಿದೆಯ ಪರಿದಿಯಲ್ಲಿ. 00:07:46.000 --> 00:07:48.000 ಅಬಾರ್ಶನ್ ಗಳ ಅವಕಾಶಗಳು ಹೆಚ್ಚಾಗಿ ಇದ್ದುದರಿಂದ 00:07:48.000 --> 00:07:50.000 ಜನರು ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಕ್ಕಳನ್ನೇ ಬಯಸಿ, 00:07:50.000 --> 00:07:52.000 ಇಂದು, ಹೆಣ್ಣು ಮಕ್ಕಳಿಗಿಂತ ೩೦ ಮಿಲಿಯನ್ ಹೆಚ್ಚು 00:07:52.000 --> 00:07:55.000 ಗಂಡು ಮಕ್ಕಳೇ ಇರುವ ಸ್ಥಿತಿಯನ್ನು ತಲುಪಿದ್ದೇವೆ. 00:07:55.000 --> 00:07:57.000 ಇದು ಭವಿಷ್ಯದಲ್ಲಿ ಸಮಾಜಕ್ಕೆ ಎದುರಾಗಲಿರುವ 00:07:57.000 --> 00:07:59.000 ಅಪಾಯವನ್ನು ತೋರುತ್ತದೆ. 00:07:59.000 --> 00:08:01.000 ಯಾರಿಗೆ ಗೊತ್ತು ..? 00:08:01.000 --> 00:08:03.000 ನಾವು ಜಾಗತೀಕರಣದ ಯುಗದಲ್ಲಿರುವುದರಿಂದ 00:08:03.000 --> 00:08:07.000 ನಮ್ಮ ಹುಡುಗರು ಬೇರೆ ದೇಶಗಳಿಂದಲೂ ತಮ್ಮ ಗೆಳತಿಯನ್ನು ಹುಡುಕಬಹುದು. 00:08:07.000 --> 00:08:10.000 ಇವರಲ್ಲಿ ಬಹುತೇಕ ವಿಧ್ಯಾವಂತರು. 00:08:10.000 --> 00:08:13.000 ಚೈನಾದ ಈಗಿನ ಯುವಜನರಲ್ಲಿ ಅನಕ್ಷರತೆ 00:08:13.000 --> 00:08:16.000 ಶೇಕಡಾ ಒಂದಕ್ಕಿಂತ ಕಡಿಮೆ ಇದೆ. 00:08:16.000 --> 00:08:19.000 ನಗರಗಳಲ್ಲಂತೂ ಶೇಕಡಾ ೮೦ರಷ್ಟು ಮಕ್ಕಳು ಕಾಲೇಜಿಗೆ ಹೋಗುತ್ತಾರೆ. 00:08:19.000 --> 00:08:23.000 ಇದರ ಜೊತೆಯಲ್ಲೇ ಇನ್ನೊಂದು ಸಮಸ್ಯೆಯಿದೆ. 00:08:23.000 --> 00:08:26.000 ಸಧ್ಯಕ್ಕೆ, ಸುಮಾರು ಶೇಕಡಾ ೭ ರಷ್ಟು ೬೫ ವಯಸ್ಸಿಗಿಂತ 00:08:26.000 --> 00:08:29.000 ಹೆಚ್ಚು ವಯಸ್ಸಿನವರಿದ್ದು.. 00:08:29.000 --> 00:08:31.000 ಇವರ ಸಂಖ್ಯೆ ೨೦೩೦ರಶ್ಟರಲ್ಲಿ 00:08:31.000 --> 00:08:33.000 ಸುಮಾರು ಶೇಕಡಾ ೧೫ ತಲುಪಲಿದೆ. 00:08:33.000 --> 00:08:35.000 ನಮ್ಮ ಸಂಪ್ರದಾಯದಂತೆ , ಯುವಕರೇ ಮುಂದೆ 00:08:35.000 --> 00:08:37.000 ಹಿರಿಯರಿಗೆ ಆರ್ಥಿಕ ಸಹಾಯಕ್ಕೆ ನಿಲ್ಲಬೇಕು. 00:08:37.000 --> 00:08:39.000 ಅವರ ಆರೋಗ್ಯದ ಜವಾಬ್ದಾರಿಯನ್ನು ಹೊರಬೇಕು. 00:08:39.000 --> 00:08:41.000 ಅಂದರೆ, ಈ ಯುವ ಪೀಳಿಗೆಯೇ 00:08:41.000 --> 00:08:44.000 ತಮ್ಮ ಪೋಷಕರನ್ನು ನಾಳೆ ಪೋಷಿಸಬೇಕು. 00:08:44.000 --> 00:08:48.000 ಆ ಪೋಷಕರ ಸರಾಸರಿ ವಯಸ್ಸು ೭೩ ವರ್ಷ. NOTE Paragraph 00:08:48.000 --> 00:08:50.000 ಹಾಗಾಗಿ.. ಈ ಯುವ ಪೀಳಿಗೆಯ ಮುಂದಿನ 00:08:50.000 --> 00:08:52.000 ಜೀವನವು ಸುಲಭವಾಗಿಯಂತು ಇಲ್ಲ. 00:08:52.000 --> 00:08:55.000 ಇಲ್ಲಿ ಪದವಿ ಪಡೆದವರಿಗೇನು ಕೊರತೆಯಿಲ್ಲ. 00:08:55.000 --> 00:08:57.000 ನಗರಗಳಲ್ಲಿ 00:08:57.000 --> 00:08:59.000 ಪದವೀಧರರು ಆರಂಭದಲ್ಲಿ 00:08:59.000 --> 00:09:01.000 ೪೦೦ ಡಾಲರ್ ಸಂಬಳ ಪಡೆಯುತ್ತಾರೆ. 00:09:01.000 --> 00:09:03.000 ಆದರೆ ಸರಾಸರಿ ಮನೆ ಬಾಡಿಗೆಯೇ 00:09:03.000 --> 00:09:05.000 ೫೦೦ ಡಾಲರ್ ಗಿಂತ ಹೆಚ್ಚು ಇರುತ್ತದೆ. 00:09:05.000 --> 00:09:08.000 ಅದಕ್ಕೆ ಅವರೇನು ಮಾಡುತ್ತಾರೆ ಗೊತ್ತೇ..? ಜಾಗವನ್ನು 00:09:08.000 --> 00:09:10.000 ಹಂಚಿಕೊಂಡು ಇಕ್ಕಟ್ಟಿನಲ್ಲಿ ಬದುಕುತ್ತಾರೆ. 00:09:10.000 --> 00:09:12.000 ಹಣ ಉಳಿಸುವುದಕ್ಕಾಗಿ. 00:09:12.000 --> 00:09:15.000 ತಮ್ಮನ್ನು "ಇರುವೆಗಳ ಗುಂಪು" ಎಂದು ಕರೆದುಕೊಳ್ಳುತ್ತಾರೆ. 00:09:15.000 --> 00:09:17.000 ನಂತರ ಮದುವೆ ಆಗಲು ಬಯಸುವವರು 00:09:17.000 --> 00:09:19.000 ಅಪಾರ್ಟ್ಮೆಂಟ್ ಬೇಕೆನಿಸಿದಾಗ, 00:09:19.000 --> 00:09:21.000 ಅವರಿಗನ್ನಿಸುತ್ತದೆ.. 00:09:21.000 --> 00:09:23.000 ಇನ್ನು ೩೦-೪೦ ವರ್ಷ ದುಡಿದ ಮೇಲೆಯೇ 00:09:23.000 --> 00:09:25.000 ಅವರು ಅಪಾರ್ಟ್ಮೆಂಟ್ ಗಳಿಸಲು ಸಾಧ್ಯ ಎಂದು. 00:09:25.000 --> 00:09:27.000 ಅಮೆರಿಕಾದಲ್ಲಿ ಒಂದು ಜೋಡಿಯು 00:09:27.000 --> 00:09:29.000 ೫ ವರ್ಷದಲ್ಲಿ ಸಂಪಾದಿಸುವುದನ್ನು ಗಳಿಸಲು 00:09:29.000 --> 00:09:32.000 ಚೈನಾದಲ್ಲಿ ೩೦-೪೦ ವರ್ಷಗಳು ಬೇಕು. 00:09:32.000 --> 00:09:36.000 ಗಗನಕ್ಕೇರುತ್ತಿರುವ ಭೂಮಿ ಬೆಲೆಯಿಂದ, NOTE Paragraph 00:09:36.000 --> 00:09:39.000 ಇಲ್ಲಿ ವಲಸೆ ಬಂದು ಬದುಕುವ ೨೦೦ ಮಿಲಿಯನ್ ಜನರಲ್ಲಿ, 00:09:39.000 --> 00:09:42.000 ಶೇಕಡಾ ೬೦ ಯುವಕರಿದ್ದು , ಅವರೆಲ್ಲಾ 00:09:42.000 --> 00:09:44.000 ತ್ರಿಶಂಕು ಸ್ಥಿತಿಯಲ್ಲಿ 00:09:44.000 --> 00:09:47.000 ನಗರ ಮತ್ತು ಹಳ್ಳಿಗಳ ಮಧ್ಯೆ ಬದುಕುತ್ತಾರೆ. 00:09:47.000 --> 00:09:50.000 ಬಹುತೇಕ ಯವಕರಿಗೆ ಹಳ್ಳಿಗಳಿಗೆ ಹೋಗಲು ಮನಸ್ಸಿರುವುದಿಲ್ಲ. 00:09:50.000 --> 00:09:52.000 ಇತ್ತ ನಗರಗಳಲ್ಲಿ ತಮ್ಮದು ಎಂದು ಏನು ಇರುವುದಿಲ್ಲ. 00:09:52.000 --> 00:09:54.000 ಹೆಚ್ಚು ಗಂಟೆಗಳ ಕಾಲ ದುಡಿಯುತ್ತಾರೆ. 00:09:54.000 --> 00:09:57.000 ಕಡಿಮೆ ಗಳಿಸುತ್ತಾರೆ.. 00:09:57.000 --> 00:09:59.000 ಯಾವಾಗಲು 00:09:59.000 --> 00:10:01.000 ಕೆಲಸ ಕಳೆದುಕೊಳ್ಳುವ ಭಯದಲ್ಲಿ, 00:10:01.000 --> 00:10:03.000 ಬೆಲೆ ಏರಿಕೆಯ ಅಥವಾ 00:10:03.000 --> 00:10:05.000 ಬ್ಯಾಂಕ್ ಗಳ ಸಾಲಗಳಿಗೆ ಸಿಲುಕಿ, 00:10:05.000 --> 00:10:07.000 ರೂಪಾಯಿ ಮೌಲ್ಯಗಳಿಗೆ ಎದುರು ನೋಡುತ್ತಾ.. 00:10:07.000 --> 00:10:09.000 ತಮ್ಮ ಪದಾರ್ಥಗಳಿಗೆ ಯುರೋಪು 00:10:09.000 --> 00:10:11.000 ಅಥವಾ ಅಮೆರಿಕಾದಿಂದ ಬೇಡಿಕೆ ಬರುಬಹುದು 00:10:11.000 --> 00:10:13.000 ಎಂದು ನಿರೀಕ್ಷಿಸುತ್ತಾ ಇರುತ್ತಾರೆ. 00:10:13.000 --> 00:10:15.000 ಕಳೆದ ವರ್ಷ, 00:10:15.000 --> 00:10:17.000 ಭಯಾನಕ ಘಟನೆ ಚೈನಾದ 00:10:17.000 --> 00:10:20.000 ಓ.ಈ.ಎಂ. ತಯಾರಿಕ ಘಟಕದಲ್ಲಿ ನಡೆಯಿತು. 00:10:20.000 --> 00:10:22.000 ೧೩ ಯುವಕರು 00:10:22.000 --> 00:10:24.000 ಸುಮಾರು ೨೦ ವರ್ಷ ವಯಸ್ಸಿನವರು, 00:10:24.000 --> 00:10:26.000 ಆತ್ಮಹತ್ಯೆಗೆ ಶರಣಾದರು. 00:10:26.000 --> 00:10:30.000 ಒಬ್ಬರ ನಂತರ ಒಬ್ಬರು .. ಯಾವುದೊ ರೋಗಕ್ಕೆ ಬಲಿಯಾದವರಂತೆ. 00:10:30.000 --> 00:10:34.000 ಅವರ ಆತ್ಮಹತ್ಯೆಯ ಕಾರಣಗಳು ಬೇರೆ ಇದ್ದಿರಬಹುದು. 00:10:34.000 --> 00:10:36.000 ಆದರೆ ಈ ಘಟನೆಯಂತು 00:10:36.000 --> 00:10:38.000 ದೇಶದಾದ್ಯಂತ ಸಾಮಾಜಿಕ 00:10:38.000 --> 00:10:40.000 ಪರಿಣಾಮ ಬೀರಿತು. 00:10:40.000 --> 00:10:42.000 ಮಾನಸಿಕವಾಗಿ ಹಾಗು ದೈಹಿಕವಾಗಿ.. 00:10:42.000 --> 00:10:44.000 ನಗರದಿಂದ ತಮ್ಮ ಹಳ್ಳಿಗಳಿಗೆ ಹಿಂದುರುಗಿದ NOTE Paragraph 00:10:44.000 --> 00:10:46.000 ವಲಸೆ ಬಂದಿದ್ದವರಿಗೆ, ತಮ್ಮ ಊರುಗಳಲ್ಲಿ 00:10:46.000 --> 00:10:49.000 ಸ್ವಾಗತವೇ ಸಿಕ್ಕಿತು. 00:10:49.000 --> 00:10:51.000 ಏಕೆಂದರೆ ಅವರಿಗೆ ಈಗ ಕಂಪ್ಯೂಟರ್ ಹಾಗು ವ್ಯವಹಾರಿಕ ಜ್ಞಾನ 00:10:51.000 --> 00:10:53.000 ನಗರಗಳಲ್ಲಿ ಸಿಕ್ಕಿತ್ತು. 00:10:53.000 --> 00:10:55.000 ಇಂಟರ್ ನೆಟ್ ಮೂಲಕ ಅವರು ಹೆಚ್ಚು ಕೆಲಸಗಳನ್ನು 00:10:55.000 --> 00:10:58.000 ಸೃಷ್ಟಿಸಲು ಶಕ್ತರಾಗಿದ್ದರು. 00:10:58.000 --> 00:11:00.000 ಸಣ್ಣ ವಿಸ್ತಾರದ ವ್ಯವಸಾಯದಲ್ಲೇ ಹಾಗಾಗಿ ಕೆಲ ವರ್ಷಗಳಿಂದ 00:11:00.000 --> 00:11:02.000 ಹೆಚ್ಚು ಅಭಿವೃದ್ದಿಯನ್ನು ತಂದರು. 00:11:02.000 --> 00:11:05.000 ಅಲ್ಲಿಯ ತನಕ ಕೆಲವು ವರ್ಷಗಳಿಂದ 00:11:05.000 --> 00:11:08.000 ಕಾರ್ಮಿಕರ ಅಭಾವವಿತ್ತು. NOTE Paragraph 00:11:08.000 --> 00:11:10.000 ಇಲ್ಲಿ ಕಾಣುವಂತೆ .. 00:11:10.000 --> 00:11:12.000 ಸಾಧಾರಣವಾಗಿ. 00:11:12.000 --> 00:11:15.000 ಎನ್ಜೆಲ್ಸ್ ಪರಿಮಾಣದಲ್ಲಿ 00:11:15.000 --> 00:11:18.000 ದಿನ ನಿತ್ಯದ ಅವಶ್ಯಕತೆಗಳ 00:11:18.000 --> 00:11:20.000 ಬೇಡಿಕೆಯಲ್ಲಿ ಇಳಿತವನ್ನು ಕಾಣಬಹುದು. 00:11:20.000 --> 00:11:22.000 ಕಳೆದ ವರ್ಷಗಳಲ್ಲಿ 00:11:22.000 --> 00:11:24.000 ಕುಟುಂಬದ ಆದಾಯದಲ್ಲಿ 00:11:24.000 --> 00:11:27.000 ಶೇಕಡಾ ೩೭ ಖರ್ಚು ಇದ್ದು. 00:11:27.000 --> 00:11:29.000 ನಂತರ 2 ಕಳೆದ ವರ್ಷಗಳಲ್ಲಿ 00:11:29.000 --> 00:11:31.000 ಅದು ಶೇ. ೩೯ಕ್ಕೆ ಏರಿದೆ. 00:11:31.000 --> 00:11:34.000 ಮತ್ತೆ ದಿನ ನಿತ್ಯದ ವ್ಯಯದಲ್ಲಿ ಏರಿಕೆ ಕಂಡಿದೆ. 00:11:34.000 --> 00:11:36.000 ಗಿನಿ ಪರಿಮಾಣದಲ್ಲಿ 00:11:36.000 --> 00:11:39.000 ಅಪಾಯಕಾರಿ ೦.೪ ನಾನು ದಾಟಿ .. 00:11:39.000 --> 00:11:41.000 ೦.೫ಕ್ಕೆ ಬಂದಿದೆ. 00:11:41.000 --> 00:11:44.000 ಅಮೇರಿಕಾಗಿಂತ ಕೆಟ್ಟ 00:11:44.000 --> 00:11:47.000 ಖರ್ಚಿನ ಪರಿಸ್ಥಿತಿ. 00:11:47.000 --> 00:11:49.000 ಸಾಮಾನ್ಯ ಜನರಲ್ಲಿ ಬೆಳೆಯುತ್ತಿರುವ 00:11:49.000 --> 00:11:51.000 ಅಸಹನೆಯನ್ನು ಗಮನಿಸಬಹುದು. 00:11:51.000 --> 00:11:54.000 ಹೀಗೆ ಬರುತ್ತಾ ಜನರು ತಮ್ಮ ಅತಂತ್ರ ಸ್ಥಿತಿಯ ಕಾರಣದಿಂದ 00:11:54.000 --> 00:11:57.000 ಸ್ಥಿತಿವಂತರನ್ನು ಹಾಗು ಶ್ರೀಮಂತರನ್ನು 00:11:57.000 --> 00:11:59.000 ಅಸೂಯೆಯಿಂದ ನೋಡುವುದು ಸಹ 00:11:59.000 --> 00:12:01.000 ಬೆಳೆಯುತ್ತಿದೆ. 00:12:01.000 --> 00:12:03.000 ಅದಕ್ಕಾಗಿಯೇ ಅಧಿಕಾರಿಗಳಲ್ಲಿ ಅಥವಾ ರಾಜಕಾರಿಣಿಗಳಲ್ಲಿ 00:12:03.000 --> 00:12:07.000 ಮೋಸದ ವ್ಯವಹಾರಗಳು ಕಂಡು ಬಂದ ತಕ್ಷಣ 00:12:07.000 --> 00:12:09.000 ಸಾಮಾನ್ಯ ಜನ ಬೊಬ್ಬೆಯಿಡುತ್ತಾರೆ. 00:12:09.000 --> 00:12:11.000 ಅಥವಾ ಅಸಹನಿಯರಾಗುತ್ತಾರೆ. NOTE Paragraph 00:12:11.000 --> 00:12:15.000 ಹೀಗೆ , ಮೈಕ್ರೋ ಬ್ಲಾಗ್ಸ್ ನ ಮೂಲಕ 00:12:15.000 --> 00:12:18.000 ಯುವಜನರು 00:12:18.000 --> 00:12:20.000 ಸಾಮಾಜಿಕ ನ್ಯಾಯ ಹಾಗು ಸರ್ಕಾರದ ಬದ್ದತೆಯನ್ನು 00:12:20.000 --> 00:12:23.000 ಅತಿಯಾಗಿ ಪ್ರಶ್ನಿಸುತ್ತಾರೆ. 00:12:23.000 --> 00:12:25.000 ಕಳೆದ ದಶಕಗಳಲ್ಲಿ ಹೆಚ್ಚಿದ 00:12:25.000 --> 00:12:29.000 ಅಭಿವೃದ್ದಿ ಕೆಲಸಗಳು ಹಾಗು ನಗರೀಕರಣಗಳು 00:12:29.000 --> 00:12:32.000 ಸಮಾಜದ ಆಸ್ತಿಗಳನ್ನು 00:12:32.000 --> 00:12:34.000 ಕೆಡವಿ ಹಾಕಿರುವುದಕ್ಕೆ 00:12:34.000 --> 00:12:36.000 ಸಾಕ್ಷಿಯಾಗಿದೆ. 00:12:36.000 --> 00:12:39.000 ಇದು ಸಹ ಸಾಮಾನ್ಯರ ಹಾಗು ಯುವ ಪೀಳಿಗೆಯ 00:12:39.000 --> 00:12:41.000 ಆಕ್ರೋಶಕ್ಕೆ ಕಾರಣವಾಗಿದೆ. 00:12:41.000 --> 00:12:43.000 ಕೊಲೆಗಳಾಗುತ್ತಿವೆ.. 00:12:43.000 --> 00:12:47.000 ಕೆಲವೊಮ್ಮೆ ಅನ್ಯಾವನ್ನು ವಿರೋಧಿಸಿ ಆತ್ಮಹತ್ಯೆಗಳಾಗುತ್ತಿವೆ. 00:12:47.000 --> 00:12:49.000 ಇಂತಹ ಘಟನೆಗಳು ಪಡೆ ಪಡೆ 00:12:49.000 --> 00:12:51.000 ಇ -ಮಾಧ್ಯಮದಲ್ಲಿ ಪ್ರಚಾರವಾದಾಗ 00:12:51.000 --> 00:12:54.000 ಕ್ರಮತೆಗೆದುಕೊಳ್ಳಲು ಸರ್ಕಾರಕ್ಕೆ ಜನರು ಒತ್ತಾಯ ಮಾಡುತ್ತಾರೆ. NOTE Paragraph 00:12:54.000 --> 00:12:57.000 ಸಧ್ಯದ ಸಿಹಿ ಸುದ್ದಿಯೆಂದರೆ, 00:12:57.000 --> 00:13:00.000 ರಾಜ್ಯದ ನಿಯೋಗವೊಂದು ಹೊಸ ಕಾಯಿದೆಯನ್ನು ಜಾರಿಗೊಳಿಸಿತು. 00:13:00.000 --> 00:13:03.000 ಅದರಂತೆ ಕಟ್ಟಡಗಳ ನಿರ್ಮಾಣ ಅಥವಾ ನಿರ್ನಾಮಗಳ 00:13:03.000 --> 00:13:05.000 ವಿರೋಧವಾಗಿ ನ್ಯಾಯಾಲಯಕ್ಕೆ 00:13:05.000 --> 00:13:07.000 ಮನವಿಯನ್ನು 00:13:07.000 --> 00:13:09.000 ಸಲ್ಲಿಸಬಹುದು. 00:13:10.000 --> 00:13:13.000 ಇದರಂತೆಯೇ ಸಾಮಾಜಿಕ ಭದ್ರತೆಯು 00:13:13.000 --> 00:13:16.000 ಈ ಮಾಧ್ಯಮದಲ್ಲಿ ಬಿಸಿ ಸುದ್ದಿಗಳಾಗಿವೆ. 00:13:16.000 --> 00:13:18.000 ವಾಯು ಮಾಲಿನ್ಯ. 00:13:18.000 --> 00:13:21.000 ಜಲಮಾಲಿನ್ಯ.. ಕಲಬೆರಕೆ ಆಹಾರ.. 00:13:21.000 --> 00:13:24.000 ಇನ್ನು ಮುಂದಾಗಿ , ಮಾಂಸವನ್ನು ಕಲಬೆರಕೆ ಮಾಡಲಾಗುತ್ತಿದೆ. 00:13:24.000 --> 00:13:26.000 ಕೆಲವು ರಾಸಾಯನಿಕಗಳು 00:13:26.000 --> 00:13:29.000 ಮೀನು ಅಥವಾ ಕೋಳಿ ಮಾಂಸದ ಮೇಲೆ ಸವರಿದಾಗ 00:13:29.000 --> 00:13:32.000 ದನದ ಮಾಂಸದಂತೆಯೇ ಕಾಣುತ್ತದೆ ಎಂದು ಹೇಳಲಾಗಿದೆ. 00:13:32.000 --> 00:13:34.000 ನಂತರ , 00:13:34.000 --> 00:13:36.000 ಜನಸಾಮಾನ್ಯರು ಹೊರಗಡೆ ಬಳಸುವ 00:13:36.000 --> 00:13:39.000 ಅಡುಗೆ ಎಣ್ಣೆಯು 00:13:39.000 --> 00:13:41.000 ಪುನಃ ಬಳಕೆಯಾಗುತ್ತಿರುವುದರ 00:13:41.000 --> 00:13:43.000 ಬಗ್ಗೆಯೂ ಗಮನ ಹರಿಸಿದ್ದಾರೆ. 00:13:43.000 --> 00:13:45.000 ಈ ಎಲ್ಲಾ ವಿಚಾರಗಳು 00:13:45.000 --> 00:13:49.000 ಅಂತರ್ಜಾಲದಲ್ಲಿ ಅತಿ ಚರ್ಚಿತವಾಗುತ್ತವೆ. 00:13:49.000 --> 00:13:51.000 ಅದೃಷ್ಟವಶಾತ್ 00:13:51.000 --> 00:13:53.000 ನಾವು ಕಂಡಂತೆ 00:13:53.000 --> 00:13:56.000 ಸರ್ಕಾರವು ಸಾಮಾಜಿಕ ಸಮಸ್ಯಗಳಿಗೆ 00:13:56.000 --> 00:13:58.000 ಬೇಗ ಪ್ರತಿಕ್ರಯಿಸುವುದರಿಂದ .. NOTE Paragraph 00:13:58.000 --> 00:14:00.000 ಯುವಜನರು ಸಹ 00:14:00.000 --> 00:14:02.000 ಸಾಮಾಜಿಕ ವ್ಯವಸ್ಥೆ 00:14:02.000 --> 00:14:04.000 ನಿರ್ಮಾಣ ಮಾಡಲು ಭಾಗಿಯಾಗುತ್ತಿದ್ದಾರೆ. 00:14:04.000 --> 00:14:06.000 ಆದರೆ ಕೆಲವೊಮ್ಮೆ ಅವರು ತಮ್ಮ ವ್ಯಯಕ್ತಿಕ ಜೀವನದ 00:14:06.000 --> 00:14:09.000 ಆವಶ್ಯಕತೆಗಳಿಗೆ ಸಂಬಂಧಿಸಿದಂತೆ ಗೊಂದಲಕ್ಕೊಳಗಾಗುತ್ತಾರೆ. 00:14:09.000 --> 00:14:11.000 ಚೈನಾ ದೇಶವು ಅಮೆರಿಕವನ್ನು 00:14:11.000 --> 00:14:13.000 ಮೀರಿ ಐಶಾರಾಮಿ ವಸ್ತುಗಳಿಗೆ 00:14:13.000 --> 00:14:15.000 ದೊಡ್ಡ ಮಾರುಕಟ್ಟೆ ಆಗುತ್ತಿದೆ. 00:14:15.000 --> 00:14:17.000 ಅದರಲ್ಲೂ ಯುರೋಪು ಹಾಗು ಇತರ ದೇಶಗಳಲ್ಲಿ 00:14:17.000 --> 00:14:19.000 ನಡೆಯುವ ಚೈನಾದ ವ್ಯವಹಾರವನ್ನು ಬಿಟ್ಟು. 00:14:19.000 --> 00:14:22.000 ಈ ಬಳಕೆದಾರರಲ್ಲಿ ಅರ್ಧ ಜನ 00:14:22.000 --> 00:14:25.000 ೨೦೦೦ ಡಾಲರ್ ಗಿಂತ ಕಡಿಮ ಸಂಬಳ ಪಡೆಯುವವರು. 00:14:25.000 --> 00:14:27.000 ಅವರೇನು ತುಂಬಾ ಆದಾಯ ಇರುವವರಲ್ಲ. 00:14:27.000 --> 00:14:30.000 ದುಬಾರಿ ವಸ್ತುಗಳಿಂದ ತಮ್ಮ 00:14:30.000 --> 00:14:33.000 ತಮ್ಮ ದೊಡ್ದಸ್ಥಿಕೆಯನ್ನು ತೋರಿಸಿಕೊಳ್ಳಲು ಅಷ್ಟೇ. 00:14:33.000 --> 00:14:35.000 ಈಗ ಈ ಹುಡುಗಿ.. 00:14:35.000 --> 00:14:37.000 ಟಿವಿ ಷೋ ಒಂದರಲ್ಲಿ ಹೇಳುವಂತೆ, 00:14:37.000 --> 00:14:39.000 ತಾನು ಸೈಕಲ್ ನ ಮೇಲೆ ಕುಳಿತು ನಗುವುದಕ್ಕಿಂತ 00:14:39.000 --> 00:14:42.000 ಬಿ.ಎಂ. ಡಬ್ಲ್ಯು. ಕಾರಿನಲ್ಲಿ ಕುಳಿತು ಅಳುವುದನ್ನೇ ಬಯಸುತ್ತಾಳೆ. 00:14:42.000 --> 00:14:44.000 ನಮ್ಮಲ್ಲಿ ಕೆಲವರು ನಗುವನ್ನು ಬಯಸುವ 00:14:44.000 --> 00:14:46.000 ಯುವಜನರು ಸಹ ಇದ್ದಾರೆ. 00:14:46.000 --> 00:14:48.000 ಕಾರ್ ಆಗಲಿ ಅಥವಾ ಸೈಕಲ್ ನಲ್ಲೆ ಆಗಲಿ. NOTE Paragraph 00:14:48.000 --> 00:14:52.000 ಹಾಗೆ ಮುಂದಿನ ಚಿತ್ರದಲ್ಲಿ , ಒಂದು ಹೊಸ ಪ್ರಯೋಗವನ್ನು ನೋಡಿ.. 00:14:52.000 --> 00:14:55.000 "ಬೆತ್ತಲೆ ಮದುವೆ".. 00:14:55.000 --> 00:14:58.000 ಅಂದರೆ .. ಮದುವೆಯಲ್ಲಿ ಏನನ್ನು ಧರಿಸುವುದಿಲ್ಲವೇ ಎಂದು ಗಾಬರಿಯಾಗಬೇಡಿ 00:14:58.000 --> 00:15:01.000 ಇಲ್ಲಿ ಯುವ ಜೋಡಿಯು ಯಾವುದೇ ಅಲಂಕಾರ , 00:15:01.000 --> 00:15:04.000 ಒಡವೆ ಹಾಗು ಸಡಗರವಿಲ್ಲದೇ 00:15:04.000 --> 00:15:06.000 ಮದುವೆಯಾಗಲು ಸಿದ್ಧರಿದ್ದಾರೆ. 00:15:06.000 --> 00:15:09.000 ಕಾರಣ, ಅವರ ಪ್ರೀತಿಯ ಮಹತ್ವವನ್ನು ತಿಳಿಸಲು. 00:15:09.000 --> 00:15:12.000 ಹಾಗೆಯೇ ಕೆಲವರು ಈ ಮಾಧ್ಯಮಗಳ ಮೂಲಕ ಒಳ್ಳೆಯದನ್ನು ಮಾಡುತ್ತಿದ್ದಾರೆ. 00:15:12.000 --> 00:15:14.000 ಮೊದಲ ಚಿತ್ರದಲ್ಲಿ ಕಂಡ 00:15:14.000 --> 00:15:18.000 ೫೦೦ ನೂರು ಬೀದಿನಾಯಿಗಳನ್ನು ಹಿಡಿದು 00:15:18.000 --> 00:15:20.000 ಆಹಾರಕ್ಕಾಗಿ ಕೊಂಡೊಯ್ಯುತ್ತಿರುವ 00:15:20.000 --> 00:15:23.000 ಈ ವಾಹನವನ್ನು ಕಂಡು ಹಿಡಿದು ತಡೆದಾಗ 00:15:23.000 --> 00:15:25.000 ಇಡಿ ದೇಶವೇ 00:15:25.000 --> 00:15:27.000 ಮಕಿರೋ ಬ್ಲಾಗ್ ನ ಮೂಲಕ ನೋಡಿ 00:15:27.000 --> 00:15:29.000 ಜನರು ಸ್ವತಃ ಬಂದು 00:15:29.000 --> 00:15:32.000 ಅವುಗಳ ರಕ್ಷಣೆಗೆ ನಿಂತರು. 00:15:32.000 --> 00:15:34.000 ಸುಮಾರು ಗಂಟೆಗಳ ವಿವಾದದ ನಂತರ 00:15:34.000 --> 00:15:37.000 ನಾಯಿಗಳನ್ನು ಬಿಡುಗಡೆಗೊಳಿಸಲಾಯಿತು. 00:15:37.000 --> 00:15:41.000 ಹಾಗೆ ಇಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ಸಹಾಯ ಮಾಡುತ್ತಾರೆ. 00:15:41.000 --> 00:15:44.000 ತನ್ನ ಕಾಣೆಯಾದ ಮಗನ ಭಾವಚಿತ್ರವನ್ನು ಅಂತರ್ಜಾಲದಲ್ಲಿ ಹಾಕಿದ್ದ ನಂತರ 00:15:44.000 --> 00:15:47.000 ನೂರಾರು ಅನಾಥ ಮಕ್ಕಳ 00:15:47.000 --> 00:15:49.000 ಮಧ್ಯ ಮಗುವನ್ನು 00:15:49.000 --> 00:15:52.000 ಮೈಕ್ರೋ ಬ್ಲಾಗ್ಮ್ ನ ಮೂಲಕ 00:15:52.000 --> 00:15:54.000 ಹುಡುಕಿ ತಮ್ಮ ಕುಟುಂಬಕ್ಕೆ ಸೇರಿಸಲಾಯ್ತು. NOTE Paragraph 00:15:54.000 --> 00:15:57.000 ಹಾಗಾಗಿ ಇಂದು ನಗುವೇ ಅತಿ ಮುಖ್ಯ ಉದ್ದೇಶ. 00:15:57.000 --> 00:16:00.000 ೨ ವರ್ಷಗಳಿಂದ ನಗು ಎನ್ನುವುದು 00:16:00.000 --> 00:16:03.000 ತಮ್ಮ ವ್ಯಯಕ್ತಿಕ ಆಸೆ ಹಾಗು ಲ್ಲ. 00:16:03.000 --> 00:16:05.000 ನಿರೀಕ್ಷೆಗಳಿಗೆ ಮೀಸಲಾಗಿ 00:16:05.000 --> 00:16:07.000 ಈಗ ಅದು ತಮ್ಮ ಪರಿಸರಕ್ಕೂ ಸಂಬಂಧಿಸಿದೆ. 00:16:07.000 --> 00:16:10.000 ಜನರಿಗೆ ಹಲವಾರು ಪ್ರಶ್ನೆಗಳು ಬರುತ್ತಿವೆ. 00:16:10.000 --> 00:16:13.000 ನಾವು ನಮ್ಮ ಪರಿಸರವನ್ನು 00:16:13.000 --> 00:16:16.000 ಅಭಿವೃದ್ದಿಯ ಆಸೆಗೆ ಬಳಿ ಕೊಡುತ್ತಿದ್ದೆವೆಯೇ..? 00:16:16.000 --> 00:16:19.000 ನಾವು ಸಮಾಜದಲ್ಲಿ ಆರ್ಥಿಕ ಮುನ್ನಡೆಗಾಗಿ ಹಾಗು ಭದ್ರತೆಗಾಗಿ ಬೇಕಾದ 00:16:19.000 --> 00:16:22.000 ಬದಲಾವಣೆಯನ್ನು ಹೀಗೆ ತರಲಿದ್ದೇವೆ..? 00:16:22.000 --> 00:16:25.000 ಹಾಗು ನಮ್ಮ ಆತ್ಮಶುದ್ಧಿಯು 00:16:25.000 --> 00:16:28.000 ವ್ಯವಸ್ಥೆಯು ಎಷ್ಟು 00:16:28.000 --> 00:16:30.000 ಸಮಂಜಸವಾಗಿದೆ..? 00:16:30.000 --> 00:16:33.000 ಇಂತಹಾ ಯೋಚನೆಗಳಿಗೆ ಹೆಚ್ಚು ಜನರು ಬೀಳುತ್ತಿದ್ದಂತೆ, 00:16:33.000 --> 00:16:36.000 ಇವೆಲ್ಲ ಗೊಂದಲಗಳ ಮಧ್ಯೆ 00:16:36.000 --> 00:16:39.000 ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. 00:16:39.000 --> 00:16:41.000 ಅದು ನಮ್ಮ ಯುವ ಪೀಳಿಗೆಯ ಮೂಲಕ.. 00:16:41.000 --> 00:16:43.000 ಅವರು ನಮ್ಮ ದೇಶವನ್ನು ಬದಲಾಯಿಸುವುದರ ಮೂಲಕ. 00:16:43.000 --> 00:16:47.000 . ಹಾಗು ಅದರ ನಿಟ್ಟಿನಲ್ಲಿ ತಮ್ಮನ್ನೂ ಬದಲಾಯಿಸಿಕೊಳ್ಳುವುದರ ಮೂಲಕ. NOTE Paragraph 00:16:47.000 --> 00:16:49.000 ಧನ್ಯವಾದ .. :) NOTE Paragraph 00:16:49.000 --> 00:16:52.000 ....ಚಪ್ಪಾಳೆ....