ಶುಭೋದಯ. ಚೆನ್ನಾಗಿದ್ದೀರಾ ? ಇದು ತುಂಬ ಅದ್ಭುತವಾಗಿದೆ, ಅಲ್ಲವೆ ? ನಾನಂತೂ ಈ ಎಲ್ಲದರಿಂದ ಮೂಕವಿಸ್ಮಿತನಾಗಿದ್ದೇನೆ. ನಿಜ ಹೇಳಬೇಕು ಅಂದ್ರೆ, ನಾ ಹೊರಟೆ. (ನಗು) ಮೂರು ವಿಚಾರಧಾರೆಗಳು ಈ ಸಭೆಗಳಲ್ಲಿ ಕಂಡುಬಂದಿದೆ. ಇವುಗಳು ನನ್ನ ಈ ಭಾಷಣಕ್ಕೆ ಪ್ರಸಕ್ತವಾಗಿವೆ. ಮೊದಲನೆಯದಾಗಿ, ಮಾನವನ ಕ್ರಿಯಾತ್ಮಕತೆಗೆ ಅದ್ಬುತವಾದ ಸಾಕ್ಷಿ ನಾವು ಕೇಳಿದ ಪ್ರತಿಯೊಂದು ಭಾಷಣದಲ್ಲಿಯೂ ಹಾಗೂ ಇಲ್ಲಿ ನೆರೆದಿರುವ ಪ್ರತಿಯೊಬ್ಬ ವ್ಯಕಿಯಲ್ಲಿಯೂ ಇದು ಗೋಚರವಾಗುತ್ತಿದೆ. ಇದರ ವ್ಯವಿದ್ಯಥೆ ಹಾಗೂ ಇದರ ಪರಿಮಿತಿ ಅಪಾರ. ಎರಡನೆಯದಾಗಿ, ಇದರಿಂದಾಗಿ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದೆ ಏನು ನಡಿಯಬಹುದು ನಮಗೆ ಹೊತ್ತಿಲ್ಲ, ಭವಿಷ್ಯತ್ ಕಾಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ. ಹೇಗೆ ಇದು ರೂಪಗೊಳ್ಳುವುದೆಂದು. ನನಗೆ ಶಿಕ್ಷಣದ ವಿಚಾರದಲ್ಲಿ ಬಹಳ ಆಸಕ್ತಿ -- ವಾಸ್ತವವಾಗಿ, ನಾನು ಕಂಡ ಸಂಗತಿ ಏನಂದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. ನಿಮಗೆ ಇಲ್ಲವೇ ? ಇದು ನನಗೆ ಬಹಳ ಕುತೂಹಲಕಾರಿಯಾದ ಸಂಗತಿ. ನೀವು ಯಾವುದಾರು ಊಟದ ಔತಣಕ್ಕೆ ಹೋಗಿ, ನಾನು ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಅಂತ ಹೇಳಿ -- ವಾಸ್ತವವಾಗಿ, ನೀವು ಶಿಕ್ಷಣ ಕ್ಷೇತ್ರದಲ್ಲೇ ಇದ್ದರೆ, ಹೆಚ್ಚಿನಪಕ್ಷ ನೀವು ಯಾವ ಔತಣದಲ್ಲೂ ಇರಲ್ಲ. (ನಗು) ಇದ್ದರುನೂ ಯಾರು ನಿಮ್ಮನ್ನ ಕೇಳಲ್ಲ. ನಾ ಕೇಳಿದರೂ ತಿರುಗಿ ನನ್ನನ್ನ ಯಾರು ಕೇಳಲ್ಲ, ಆಶ್ಚರ್ಯ. ಇದು ನನಗೆ ವಿಚಿತ್ರ ಅನ್ಸುತ್ತೆ. ಆದರೂ ಊಹಿಸಿಕೊಳ್ಳಿ, ನೀವು ಯಾರನ್ನೋ ಮಾತಾಡಿಸ್ತೀರಿ, ಆಗ ಅವರು ನಿಮ್ಮನ್ನ, "ನೀವು ಏನು ಮಾಡ್ತೀರಿ?" ಅಂಥ ಕೇಳ್ತಾರೆ ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಎಂದರೆ ಆಗ ಅವರ ಮುಖ ಹೇಗೆ ಕೋಪದಿಂದ ಕೆಂಪಿಡುತ್ತದೆಂದು ನೀವು ಕಾಣಬಹುದು. ಅವರ ಭಾವನೆ, "ಅಯ್ಯೋ ದೇವರೇ, ನಾನೇ ಯಾಕೆ ಸಿಕ್ಬಿದ್ದೆ ? ಇಡೀ ವಾರದಲ್ಲಿ ನನ್ನ ಒಂದು ಬಿಡುವಿನ ಸಂಜೆ." (ನಗು) ನೀವು ಅವರ ಓದಿನ ಬಗ್ಗೆ ಕೇಳಿದಾಗ ಮಾತ್ರ ಅವರು ನಿಮ್ಮನ್ನ ಚೆನ್ನಾಗಿ ದಬಾಯಿಸ್ತಾರೆ. ಏಕಂದರೆ ಇದು, ಒಂದು ವಿಷಯ ವಕ್ತಿಗಳ ಅಂತರಾಳವನ್ನು ಮುಟ್ಟುತ್ತದೆ, ನಿಜ ಅಲ್ವೆ ? ಇದು ಮತ ಹಾಗೂ ಹಣಕಾಸು ಅಂತಹ ವಿಚಾರಗಳ ತರಹ. ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸುತ್ತೆ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತೆ. ನಾವೆಲ್ಲರೂ ಇದರ ದೊಡ್ಡ ಪಾಲುದಾರರು, ಏಕಂದರೆ, ಶಿಕ್ಷಣವೆ ನಮ್ಮನು ಅನಿರ್ದಿಷ್ಟ ಭವಿಷ್ಯದೆಡೆಗೆ ಕೊಂಡೊಯ್ಯಬೇಕು ನೀವು ಯೋಚಿಸಿ ನೋಡಿ, ಈ ವರ್ಷದಿಂದ ಶಾಲೆಗೆ ಹೋಗುವ ಮಕ್ಕಳು ೨೦೬೫ ರಲ್ಲಿ ನಿವೃತ್ತಿಯಾಗುತ್ತಾರೆ. ಕಳೆದ ನಾಲ್ಕು ದಿನಗಳಿಂದ ನಡೆದ ಪಾಂಡಿತ್ಯ ಪ್ರದರ್ಶನದ ನಂತರವೂ ಈ ಜಗತ್ತು ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ ಅಂಥ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳನ್ನ ಈ ಭವಿಷ್ಯವನ್ನು ಎದುರಿಸಲು ಶಿಕ್ಷಿಸಬೇಕು. ನನಗೆ ಅನ್ಸುತ್ತೆ ಈ ಅನಿರ್ದಿಷ್ಟತೆ ಅದ್ಬುಥವಾದದ್ದು . ಮೂರನೆಯದಾಗಿ, ನಾವೆಲ್ಲರೂ ಒಪ್ಪುವಂತಹ ವಿಷಯ ಅಂದ್ರೆ ಮಕ್ಕಳ ಅದ್ಭುತವಾದ ಸಾಮರ್ಥ್ಯಗಳು -- ಆವಿಷ್ಕಾರಕ್ಕೆ ಬೇಕಾದ ಅವರ ಸಾಮರ್ಥ್ಯ. ನಿನ್ನೆ ರಾತ್ರಿ ನಾವು ನೋಡಿದ ಸಿರೀನಳು ಒಂದು ವಿಸ್ಮಯ ಅಲ್ಲವೇ ? ಸುಮ್ಮನೆ ಅವಳು ಏನು ಮಾಡಬಹುದು ಅನ್ನುವಂತಹದ್ದು ಹಾಗೂ ಅವಳು ಅಸಾಧಾರಣವಾದವಳು, ಆದರೆ ಒಂದು ದ್ರಿಷ್ಟಿಕೊನದಲ್ಲಿ ಮಕ್ಕಳೆಲ್ಲರನ್ನ ನೋಡಿದರೆ ಅಷ್ಟು ಅಸಾಧಾರಣ ಅಲ್ಲ ಅನ್ಸುತ್ತೆ. ನಾವು ಇಲ್ಲಿ ಕಾಣುವುದೆನಂದರೆ, ಇವಳಿಗೆ ಅಸಾಧಾರಣ ಸಂಕಲ್ಪ ಶಕ್ತಿ ಇದೆ ಹಾಗೂ ಇವಳು ಒಂದು ಪ್ರತಿಭೆಯನ್ನ ಆರಿಸಿಕೊಂಡಿದ್ದಾಳೆ. ನನ್ನ ವಾದ ಏನಂದರೆ ಎಲ್ಲ ಮಕ್ಕಳಿಗೂ ಅಗಾಧವಾದ ಪ್ರತಿಭೆ ಇರುತ್ತದೆ. ಆದರೆ ನಾವು ಅದನ್ನ ಪೋಲು ಮಾಡ್ತೀವಿ, ಅದು ನಿರ್ದಾಕ್ಷಿಣ್ಯವಾಗಿ. ಅದಕ್ಕೆ ನಾನು ಶಿಕ್ಷಣದ ಬಗ್ಗೆ ಮಾತಾಡಲು ಬಯಸ್ತೀನಿ ಮತ್ತು ಕ್ರಿಯಾತ್ಮಕತೆಯ ಬಗ್ಗೆ ಮಾತಾಡಲು ಇಚ್ಛೆ ಪಡ್ತೀನಿ. ನನ್ನ ಅಭಿಪ್ರಾಯ ಏನಂದ್ರೆ ಕ್ರಿಯತ್ಮಕತೆಗೆ ಈಗ ಮುಖ್ಯ ಸ್ಥಾನ ಇದೆ ಹೇಗೆ ಸಾಕ್ಷರತೆಗೆ ಇದಿಯೋ ಹಾಗೆ, ಮತ್ತು ನಾವು ಅದಕ್ಕೆ ಅಷ್ಟೇ ಮಹತ್ವದ ಸ್ಥಾನ ಕೊಡಬೇಕು. (ಚಪ್ಪಾಳೆ) ಧನ್ಯವಾದಗಳು. ಅಷ್ಟೇ, ಅಲ್ಲಿಗೆ ಮುಗಿತು. ನಿಮ್ಮೆಲ್ಲರಿಗೂ ಧನ್ಯವಾದಗಳು. (ನಗು). ಇನ್ನು ೧೫ ನಿಮಿಷಗಳು ಉಳಿಯಿತು. ನಾನು ಹುಟ್ಟಿದೆ -- ಇಲ್ಲ (ನಗು) ನಾನು ಈಚೆಗೆ ಒಂದು ಮಹತ್ತರವಾದ ಕಥೆ ಕೇಳ್ದೆ -- ಅದನ್ನ ಹೇಳೋಕ್ಕೆ ನನಗೆ ತುಂಬಾ ಇಷ್ಟ -- ಒಂದು ಚಿಕ್ಕ ಹುಡುಗಿಯ ಬಗ್ಗೆ . ಅವಳು ಚಿತ್ರ ಬಿಡಿಸುವ ತರಗತಿಯಲ್ಲಿದ್ದಳು. ಅವಳಿಗೆ ಆರು ವರ್ಷ. ಮತ್ತೆ ಅವಳು ಹಿಂದೆ ಚಿತ್ರ ಬಿಡಿಸುತ್ತ ಕುಳಿತಿದ್ಲು , ಅವಳ ಶಿಕ್ಷಕಿ ಹೇಳ್ತಿದ್ರು ಈ ಹುಡುಗಿ ಯಾವತ್ತೂ ಗಮನವಿಟ್ಟು ಪಾಠ ಕೇಳ್ತಿರಲಿಲ್ಲ. ಆದರೆ ಈ ಚಿತ್ರ ಬಿಡಿಸುವ ತರಗತಿಯಲ್ಲಿ ಮಾತ್ರ ಗಂಭೀರವಾಗಿ ಕೆಲಸ ಮಾಡ್ತಿದ್ಲು . ಅಚ್ಚರಿಗೊಂಡ ಶಿಕ್ಷಕಿ ಇವಳ ಹತ್ತಿರ ಹೋಗಿ "ಯಾವ ಚಿತ್ರ ಬಿಡಿಸ್ತಿದಿಯ ?" ಎಂದು ಕೇಳಿದ್ರು "ನಾನು ದೇವರ ಚಿತ್ರ ಬಿಡಿಸ್ತಿದೀನಿ" ಎಂದು ಉತ್ತರಿಸಿದಳು ಅ ಹುಡುಗಿ ಅದಕ್ಕೆ ಶಿಕ್ಷಕಿ ಹೇಳಿದ್ರು, "ಯಾರಿಗೂ ದೇವರು ಹೇಗಿದ್ದಾನೆ ಅಂತ ಗೊತಿಲ್ವಲ್ಲ." ಅದಕ್ಕೆ ಹುಡುಗಿ ಹೇಳಿದಳು, "ಇನ್ನೊಂದು ನಿಮಿಷದಲ್ಲಿ ಎಲ್ಲರಗೂ ತಿಳಿಯುತ್ತೆ." (ನಗು) ಇಂಗ್ಲೆಂಡಿನಲ್ಲಿ ನನ್ನ ಮಗನಿಗೆ ನಾಲ್ಕು ವರ್ಷವಾಗಿದ್ದಾಗ -- ವಾಸ್ತವವಾಗಿ ಎಲ್ಲ ಕಡೆಯೂ ಅವನಿಗೆ ನಾಲ್ಕೇ ವರ್ಷ, (ನಗು) ಗಂಭೀರವಾಗಿ ಹೇಳ್ಬೇಕು ಅಂದ್ರೆ, ಅವನಿಗೆ ನಾಲ್ಕು ವರ್ಷ ಆಗ. ಅವನು "ನೇಟಿವಿಟಿ" ಅನ್ನುವ ನಾಟಕದಲ್ಲಿದ್ದ. ನಿಮಗೆ ಇದರ ಕಥೆ ಜ್ಞಾಪಕ ಇದೆಯೇ ? ಇಲ್ಲ , ಇದು ತುಂಬಾ ದೊಡ್ಡದಾಗಿತ್ತು. ಇದು ತುಂಬಾ ದೊಡ್ಡ ಕಥೆ. ಇದರ ಎರಡನೆಯ ಕಂತಲ್ಲಿ ಮೆಲ್ ಗಿಬ್ಸನ್ ಮಾಡಿದಾರೆ. ಇದನ್ನ ನೀವು ನೋಡಿರಬಹುದು: "ನೇಟಿವಿಟಿ ೨". ಆದರೆ ಜೇಮ್ಸ್ ಗೆ ಜೋಸೆಫ್ ಪಾತ್ರ ಸಿಕ್ಕಿತ್ತು. ಇದು ನಮ್ಮೆಲ್ಲರಿಗೆ ರೋಮಾಂಚಕ ಸಂಗತಿಯಾಗಿತ್ತು. ಇದನ್ನು ನಾಟಕಾದ ಪ್ರಮುಖ ಪಾತ್ರವೆಂದು ಪರಿಗಣಿಸಿದ್ದೆವು. ನಮ್ಮ ಏಜಂಟರು ಟಿ- ಷರಟುಗಳನ್ನು ಧರಿಸಿ ಇಡೀ ಜಾಗವನ್ನು ಮುತ್ತಿದ್ದರು. "ಜೇಮ್ಸ್ ರಾಬಿನ್ಸನ್ ಅವರೇ ಜೋಸೆಫ್!" (ನಗು) ಅವರು ಮಾತಾಡೋ ಗೋಜಿರಲಿಲ್ಲ, ಆದರೆ ನಿಮಗೆ ಸನ್ನಿವೇಶ ಗೊತ್ತು ಮೂರು ಜನ ರಾಜರು ಉಡುಗರೆಗಳನ್ನು ಹೊತ್ತು ಒಳಗೆ ಬರ್ತಾರೆ. ಮತ್ತು ಚಿನ್ನ, ಫ್ರಾಂಕಿನ್ಸೆನ್ಸ್ ಹಾಗೂ ಮಿರ್ಹ್ (ಸುಗಂಧ ದ್ರವ್ಯಗಳು) ಇವುಗಳನ್ನು ತರುತ್ತಾರೆ. ನಿಜವಾಗಿ ನಡೆದ ಸಂಗತಿ ಇದು. ನಾವು ಅಲ್ಲಿ ಕುಳಿತಿದ್ದೆವು ಮತ್ತೆ ನನಗೆ ಅನ್ಸುತ್ತೆ ಅವರು ದೃಶ್ಯಾವಳಿಯ ಅನುಕ್ರಮವನ್ನು ತಪ್ಪಿದರು, ಯಾಕಂದ್ರೆ ನಾವು ತರುವಾಯ ನಮ್ಮ ಚಿಕ್ಕ ಹುಡುಗನ ಹತ್ತಿರ ಕೇಳಿದೆವು, "ನಿನಗೆ ಸರಿಯನ್ನಿಸ್ತ ?" ಅದಕ್ಕೆ ಅವನು, "ಹೌದು, ಯಾಕೆ, ಅದು ತಪ್ಪಾಗಿತ್ತಾ?" ಅವರು ಸ್ವಲ್ಪ ಬದಲಾವಣೆ ಮಾಡಿದ್ರು, ಅಷ್ಟೇ. ಆ ದ್ರಿಶ್ಯದ ವಿವರ ಹೀಗೆ, ಮೂರು ಹುಡುಗರು ಬಂದರು, ನಾಲ್ಕು ವರ್ಷದವರು, ತಲೆಮೇಲಿ ಟೀ-ಟವಲ್ಗಳನ್ನ ಹೊದೆದವರು, ಮತ್ತು ಅವರು ಹೊತ್ತು ತಂದ ಡಬ್ಬಗಳನ್ನ ಕೆಳಗಿಟ್ಟು , ಮೊದಲನೆಯ ಬಾಲಕ ಹೇಳಿದ, "ನಾನು ಚಿನ್ನವನ್ನು ತಂದಿದ್ದೇನೆ." ಎರಡನೆಯ ಬಾಲಕ ಹೇಳಿದ, "ನಾನು ಮಿರ್ಹವನ್ನು ತಂದಿದ್ದೇನೆ." ಮೂರನೆಯ ಬಾಲಕ ಹೇಳಿದ, "ಫ್ರಾಂಕ್ ಇದನ್ನು ಕಳಿಸಿದ." (ನಗು) ಇವೆಲ್ಲ ಸಂಗತಿಗಳಲ್ಲಿ ಸಾಮಾನ್ಯವಾದ ಅಂಶವೇನಂದರೆ ಮಕ್ಕಳು [ ಇಲ್ಲಿ ಏನು ? ] ಅವರಿಗೆ ಗೊತ್ತಿಲ್ಲ ಅಂದ್ರೂ ಸಹ, ಅವರು ಹಿಂಜರಿಯಲ್ಲ. ಸರಿ ಅಲ್ವೇ ? ಅವರು ತಪ್ಪು ಮಾಡೋಕೆ ಹೆದರೋದಿಲ್ಲ. ಇವಾಗ, ಕ್ರಿಯಾತ್ಮಕವಾಗಿರೋದು ಹಾಗೂ ತಪ್ಪು ಮಾಡೋದು ಒಂದೇ ಅಂತ ನಾ ಹೇಳ್ತಿಲ್ಲ. ಆದರೆ ನಮಗೆ ಗೊತ್ತಿರೋದು ಏನಂದ್ರೆ, ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ, ನೀವು ಸ್ವಂತವಾಗಿ ಏನೂ ಮಾಡೋಕ್ಕೆ ಆಗಲ್ಲ. ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ. ಮತ್ತೆ ದೊಡ್ದವರಾಗುವಷ್ಟರಲ್ಲಿ, ಮಕ್ಕಳು ಬಹುಪಾಲಿಗೆ ಈ ಸಾಮರ್ಥ್ಯವನ್ನ ಕಳಕೊಂಡುಬಿಡ್ತಾರೆ. ದೊಡ್ದವರಾಗ್ತಿದ್ದಾಗೆ ತಪ್ಪು ಮಾಡೋಕ್ಕೆ ಭಯ ಪಟ್ಕೊಳ್ತಾರೆ. ನಾವು ನಮ್ಮ ಕಂಪನಿಗಳನ್ನ ಹೀಗೆ ನಡಿಸ್ತೀವಿ. ನಾವು ತಪ್ಪುಗಳಿಗೆ ಕಳಂಕದ ಭಾವನೆ ಹಚ್ತೀವಿ . ಇವಾಗ ನಾವು ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನ ಹೀಗೆ ನಡಿಸ್ತಿದೀವಿ, ಇದರಲ್ಲಿ ತಪ್ಪುಗಳನ್ನ ಮಾಡುವುದೆಂದರೆ ಘೋರ ಅಪರಾಧ. ಪರಿಣಾಮ ಏನಂದರೆ ನಾವು ವ್ಯಕ್ತಿಗಳನ್ನ ತಮ್ಮ ಕ್ರಿಯಾತ್ಮಕ ಸಾಮರ್ಥ್ಯವನ್ನ ಬೆಳೆಸದ ಹಾಗೆ ಶಿಕ್ಷಿಸ್ತಿದೀವಿ. ಪಿಕಾಸ್ಸೋ ಮಹಾಶಯ ಒಮ್ಮೆ ಹೀಗೆ ನುಡಿದಿದ್ದ: ಅವನು ಹೇಳಿದ್ದ ಎಲ್ಲ ಮಕ್ಕಳೂ ಹುಟ್ಟು ಕಲೆಗಾರರು. ಸಮಸ್ಯೆ ಏನಂದರೆ ಅವರು ಬೆಳೆಯುತ್ತಿದ್ದ ಹಾಗೆ ಕಲಾವಿದರಾಗಿ ಉಳಿಯುವುದು. ನಾನು ಇದನ್ನ ಸಂಪೂರ್ಣವಾಗಿ ನಂಬುತ್ತೀನಿ: ಏನಂದ್ರೆ, ನಾವು ಬೆಳೆಯುತಿದ್ದ ಹಾಗೆ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದಿಲ್ಲ ಅದರಿಂದ ದೂರವಾಗ್ತೀವಿ. ಸರಿಯಾಗಿ ಹೇಳೋದಾದ್ರೆ, ಶಿಕ್ಷಣದ ದೆಸೆಯಿಂದ ಇದು ನಡೆಯುತ್ತದೆ. ಯಾಕೆ ಹೀಗೆ ? ನಾನು ಐದು ವರ್ಷಗಳ ಹಿಂದೆ ಸ್ಟ್ರಾಟ್ಫೋರ್ಡ್-ಆನ್-ಅವೊನ್ ಅಲ್ಲಿ ವಾಸಿಸುತ್ತಿದ್ದೆ. ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. ನೀವೇ ಊಹಿಸಬಹುದು ಎಂತಹ ಸಲೀಸಾದ ಪರಿವರ್ತನೆ ಅದು ಅಂತ. (ನಗು) ನಾವು ಸ್ನಿಟ್ಟೆರ್-ಫೀಲ್ಡ್ ಎಂಬ ಜಾಗದಲ್ಲಿ ವಾಸಿದುತ್ತಿದ್ದೆವು, ಸ್ಟ್ರಾಟ್ಫೋರ್ಡ್-ನ ಸ್ವಲ್ಪ ಆಚೆ, ಶೇಕ್ಸ್-ಸ್ಪಿಯರ್ ನ ತಂದೆ ಜನಿಸಿದ ಊರು. ಹೊಸದೊಂದು ಆಲೋಚನೆಗೆ ಸಿಲುಕಿದಿರ ನೀವು ? ನನಗೆ ಬಂದಿತ್ತು ಈ ಆಲೋಚನೆ. ಶೇಕ್ಸ್-ಸ್ಪಿಯರ್-ಗೆ ತಂದೆ ಇರುವ ವಿಷಯ ನೀವು ಯೋಚಿಸಿರಲಿಲ್ಲ, ಅಲ್ಲವೆ ? ಏಕಂದ್ರೆ ನೀವು ಶೇಕ್ಸ್-ಸ್ಪಿಯರ್ ಮಗುವಾಗಿದ್ದ ಅಂತಾನೂ ಯೋಚಿಸಿರಲಿಲ್ಲ, ಹೌದಲ್ಲವೆ ? ಶೇಕ್ಸ್-ಸ್ಪಿಯರ್ ಏಳು ವರ್ಷದ ಬಾಲಕ ? ನಾನಂತೂ ಆಲೋಚಿಸಿರಲಿಲ್ಲ. ಅವನು ಯಾವಾಗಲೋ ಒಂದು ಕಾಲದಲ್ಲಿ ಏಳು ವರ್ಷದ ಬಾಲಕನಾಗಿದ್ದ. ಅವನು ಯಾರದೋ ಇಂಗ್ಲೀಷ್ ತರಗತಿಯಲ್ಲಿ ಇದ್ದ, ಅಲ್ಲವೆ ? [ ಇಲ್ಲಿ ಏನು ] (ನಗು) "ನೀನು ಇನ್ನು ಕಷ್ಟ ಪಡಬೇಕು." ಅವನ ತಂದೆ ಅವನ್ನು ಮಲಗು ಅಂತ ಹೇಳೋದು, ಶೇಕ್ಸ್-ಸ್ಪಿಯರ್-ಗೆ, "ಮಲಗು ನೀನು ಈಗ," ವಿಲ್ಲಿಯಮ್ ಶೇಕ್ಸ್-ಸ್ಪಿಯರ್-ಗೆ, "ಪೆನ್ಸಿಲ್ ಕೆಳಗೆ ಹಾಕು ಹಾಗೆ ಸುತ್ತಿ-ಬಳಸಿ ಮಾತಾಡಬೇಡ. ಎಲ್ಲಾರ್ಗೂ ಕಷ್ಟ ಆಗುತ್ತೆ ಅರ್ಥವಾಗುವುದಕ್ಕೆ ." (ನಗು) ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. ಮತ್ತು ನಮ್ಮ ಈ ಬದಲಾವಣೆಯ ಬಗ್ಗೆ ಒಂದೆರಡು ಮಾತುಗಳನ್ನ ಆಡಲು ಇಷ್ಟ ಪಡ್ತೇನೆ ನನ್ನ ಮಗನಿಗೆ ಊರು ಬಿಟ್ಟು ಬರಲು ಇಷ್ಟ ಇರಲಿಲ್ಲ. ನನಗೆ ಎರಡು ಮಕ್ಕಳು. ಅವನಿಗೆ ೨೧ ವರ್ಷ ಈಗ; ನನ್ನ ಮಗಳಿಗೆ ೧೬. ಅವನಿಗೆ ಲಾಸ್ ಎನ್ಜಿಲೀಸ್ ಗೆ ಹೋಗಲು ಮನಸು ಇರಲಿಲ್ಲ. ಅವನಿಗೆ ಆಸೆ ಏನೋ ಇತ್ತು, ಆದರೆ ಅವನಿಗೆ ಅಬ್ಬಳು ಗರ್ಲ್-ಫ್ರೆಂಡ್ ಇದ್ದಳು ಇಂಗ್ಲೆಂಡಿನಲ್ಲಿ. ಅವನ ಪ್ರಾಣದ ಪ್ರೇಯಸಿಯಾಗಿದ್ದಳು, ಸಾರಾ ಅವಳ ಹೆಸರು. ಒಂದು ತಿಂಗಳ ದೀರ್ಘ-ಕಾಲದಿಂದ ಅವಳ ಪರಿಚಯವಿತ್ತು. [ ಇಲ್ಲಿ ಏನು ? ] ಏಕಂದ್ರೆ ನೀವು ೧೬ ವರ್ಷಕ್ಕಿಂತ ದೊಡ್ದವರಾಗಿದ್ದರೆ ಇದು ಬಹಳ ದೀರ್ಘಾವಧಿ. ಆದ್ದರಿಂದ ವಿಮಾನದಲ್ಲಿ ಬಹಳ ಬೇಸರ ಪಟ್ಕೊಂಡಿದ್ದ. ಮತ್ತೆ ಹೇಳಿದ, "ನನಗೆ ಸಾರಾ ಅಂತ ಹುಡುಗಿ ಎಲ್ಲೂ ಸಿಗದಿಲ್ಲ." ಆದರೆ ನಾವು ಬಹಳ ಖುಷಿಯಾಗಿದ್ವಿ , ನಿಜವಾಗಲೂ, ಏಕಂದ್ರೆ ಅವಳೇ ನಾವು ದೇಶ ಬಿಟ್ಟು ಹೋಗಲು ಮುಖ್ಯ ಕಾರಣ. (ನಗು) ನೀವು ಅಮೇರಿಕಾಗೆ ಹೋದರೆ ಒಂದು ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ ನೀವು ಪ್ರಪಂಚದಲ್ಲಿ ಎಲ್ಲೇ ಹೋದರೂ ಇದು ಗಮನಕ್ಕೆ ಬರುತ್ತದೆ: ಜಗತ್ತಿನ ಪ್ರತಿಯೊಂದು ಶಿಕ್ಷಣ ಪದ್ದತಿಯಲ್ಲೂ ಒಂದೇ ವಿಧವಾದ ಪಠ್ಯಕ್ರಮ. ಎಲ್ಲದರಲ್ಲಿಯೂ ಒಂದೇ ಕ್ರಮ. ನೀವು ಎಲ್ಲೇ ಹೋಗಿ. ನೀವು ಬೇರೆ ಇರಬಹುದು ಅಂದ್ಕೋಳ್ಬಹುದು, ಆದರೆ ಹಾಗೆ ಇಲ್ಲ. ಮುಂಚೂಣಿಯಲ್ಲಿ ಗಣಿತ ಮತ್ತು ಭಾಷೆಗಳು, ಆಮೇಲೆ ಸಮಾಜ ಶಾಸ್ತ್ರ, ಮತ್ತು ಕೆಳಗೆ ಕಲೆ. ಭೂಮಿಯ ಎಲ್ಲ ಕಡೆಯೂ ಅಷ್ಟೇ. ಹಾಗೂ ಎಲ್ಲಾ ಶಿಕ್ಷಣ ಪದ್ದತಿಗಳಲ್ಲೂ ಇದೇ ರೀತಿ, ಕಲೆಯಲ್ಲಿಯೂ ಒಂದು ಕ್ರಮ ಉಂಟು. ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ, ಆದ್ಯತೆ ಆಮೇಲೆ ನಾಟಕ ಹಾಗೂ ನೃತ್ಯ. ಈ ಭೂಮಿಯ ಮೇಲೆ ಒಂದು ಶಿಕ್ಷಣ ಪದ್ದತಿಯೂ ಇಲ್ಲ, ಯಾವುದಲ್ಲಿ ನೃತ್ಯವನ್ನ ದಿನನಿತ್ಯವೂ ಮಕ್ಕಳಿಗೆ ಕಲಿಸುತ್ತಾರೆ ಯಾವ ರೀತಿಯಲ್ಲಿ ಗಣಿತವನ್ನ ಕಲಿಸುತ್ತೀವೋ ಹಾಗೆ. ಯಾಕೆ ? ಯಾಕೆ ಇರಬಾರದು ? ನನಗೆ ಅನ್ಸುತ್ತೆ ಇದು (ನೃತ್ಯ) ಬಹಳ ಮುಖ್ಯ. ಗಣಿತವೂ ಅತಿಮುಖ್ಯ , ಆದರೆ ನೃತ್ಯವೂ ಅಷ್ಟೇ ಮುಖ್ಯ. ಮಕ್ಕಳನ್ನ ಬಿಟ್ಟರೆ ಯಾವಾಗಲೂ ನರ್ತಿಸ್ತಾರೆ, ನಾವೆಲ್ಲಾರೂ ಮಾಡ್ತೀವಿ. ನಮ್ಮೆಲ್ಲರಿಗೂ ದೇಹ ಇದೆ, ಅಲ್ಲವೇ ? [ ಇಲ್ಲಿ ಏನು ?] (ನಗು) ನಿಜವಾಗಿಲು, ಏನಾಗುತ್ತೆ ಅಂದ್ರೆ, ಮಕ್ಕಳು ಬೆಳಿತಿದ್ದ ಹಾಗೆ, ನಾವು ಅವರನ್ನ ಶಿಕ್ಷಿಸ್ತೀವಿ ಹೇಗೆಂದರೆ ಸೊಂಟದಿಂದ ಮೇಲಕ್ಕೆ . ಆಮೇಲೆ ನಾವು ಮೆದುಳಿನ ಮೇಲೆ ಹೆಚ್ಚಿನ ಗಮನವಹಿಸುತ್ತೀವಿ. ಅದೂ ಒಂದು ಭಾಗದಲ್ಲಿ ಮಾತ್ರ. ನೀವು ಶಿಕ್ಷಣವನ್ನು ಒಂದು ಅನ್ಯಗ್ರಹ ಜೀವಿಗೆ ಇರಬಹುದಾದ ದೃಷ್ಟಿಕೋನದಿಂದ ವೀಕ್ಷಿಸಿದರೆ, ಹಾಗೂ "ಸಾರ್ವಜನಿಕ ಶಿಕ್ಷಣ ಪದ್ದತಿಯು ಯಾವ ಕಾರಣಕ್ಕೆ ಇದೆ ?" ಎಂದು ಕೇಳಿದರೆ, ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ನೀವು ಇದರ (ಶಿಕ್ಷಣದ) ಉತ್ಪತ್ತಿಯನ್ನ ನೋಡಿದರೆ, ಯಾರು ನಿಜವಾಗಿಲು ಯಶಸ್ವಿಗಳಾಗುತ್ತಾರೆ ಇದರಿಂದ, ಯಾರು ಮಾಡಬೇಕಾದದ್ದನ್ನೆಲ್ಲಾನೂ ಮಾಡುತ್ತಾರೆ, ಯಾರಿಗೆ [ಇಲ್ಲಿ ಏನು?], ಯಾರು ನಿಜವಾದ ವಿಜೇತರು -- ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ಸಾರ್ವಜನಿಕ ಶಿಕ್ಷಣ ಪದ್ದತಿಯ ಮೂಲ ಉದ್ದೇಶ ವಿಶ್ವದ ಎಲ್ಲ ಭಾಗದಲ್ಲೂ ಏನಂದರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ತಯಾರು ಮಾಡೋದು. ಅಲ್ಲವೇ ? ಅವರುಗಳೆ ಈ ಪದ್ದತಿಯ ಮುಂಚೂಣಿಯಲ್ಲಿ ಬರ್ತಾರೆ. ಹಿಂದೆ ನೀನು ಒಬ್ಬ ಅಂತಹ ವ್ಯಕ್ತಿ ಆಗಿದ್ದೆ. (ನಗು) ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ನಾನು ಮೆಚ್ಚುತ್ತೀನಿ, ಆದರೆ ಅವರನ್ನ ನಾವು ಮಾನವನ ಸಾಧನೆಯ ಶಿಖರಕ್ಕೆ ಸೇರಿಸಬಾರದು. ಅವರು ಒಂದು ತರಹದ ಜೀವದ ಪ್ರಕಾರ, [ಇಲ್ಲಿ ಏನು?]. ಆದರೆ ಅವರು ಬಹಳ ಕುತೂಹಲಕಾರಿಯಾದ ಪ್ರಕಾರ, ಅವರ ಮೇಲಿನ ನನ್ನ ಆದರದಿಂದ ಹೀಗೆ ಹೇಳ್ತೀನಿ. ನನ್ನ ಅನುಭವದಲ್ಲಿ ಕಂಡ ಪ್ರಾಧ್ಯಾಪಕರ ಒಂದು ಕುತೂಹಲಕಾರಿಯಾದ ಸಂಗತಿ ಎಲ್ಲರೂ ಅಲ್ಲ, ಆದರೆ ಸಾಮಾನ್ಯವಾಗಿ -- ಅವರುಗಳು ಮಾನಸಿಕ ಪ್ರಪಂಚದಲ್ಲಿ ಬದುಕುತ್ತಾರೆ ಅವರ ಜೀವನ ಮೆದುಳಿಗೆ ಸೀಮಿತ, ಅದರಲ್ಲೂ ಒಂದು ಭಾಗದಲ್ಲಿ ಮಾತ್ರ. ಅವರು ಕಾಯರಹಿತರು, ಗೊತ್ತ, ಒಂದು ರೀತಿ ಅಕ್ಷರಸಹ ನಿಜ, ತಮ್ಮ ದೇಹವನ್ನು ಮಿದುಳಿಗೆ ಒಂದು ಮಾದರಿಯ ವಾಹನವಾಗಿ ಕಾಣುತ್ತಾರೆ, ಅಲ್ಲವೇ ? (ನಗು) ಅವರ ಮಿದುಳನ್ನ ಮೀಟಿಂಗ್-ಗಳಿಗೆ ಒಯ್ಯುವಂಥ ಮಾರ್ಗ. ನಿಮಗೆ ದೇಹ-ಬಾಹಿರ ಅನುಭವದ ನಿಜವಾದ ಸಾಕ್ಷಿ ಬೇಕೆಂದರೆ ನೀವು ಹಿರಿಯ ಶಿಕ್ಷಕರ ಕಾನ್ಫಾರೆನ್ಸೆಗೆ ಹೋಗಿ ಹಾಗೂ ಕೊನೆಯ ದಿನ ರಾತ್ರಿ ನಡೆಯುವ ಡಿಸ್ಕೋಗೆ ಒಂದು ಭೇಟಿ ನೀಡಿ (ನಗು) ಅಲ್ಲಿ ನೀವು ನೋಡ್ತೀರಿ -- ದೊಡ್ಡವರಾದ ಪುರಷರು ಹಾಗೂ ಮಹಿಳೆಯರು [ಇಲ್ಲಿ ಏನು]