0:00:00.000,0:00:07.000 ಶುಭೋದಯ. ಚೆನ್ನಾಗಿದ್ದೀರಾ ? ಇದು ತುಂಬ ಅದ್ಭುತವಾಗಿದೆ, ಅಲ್ಲವೆ ? 0:00:07.000,0:00:11.000 ನಾನಂತೂ ಈ ಎಲ್ಲದರಿಂದ ಮೂಕವಿಸ್ಮಿತನಾಗಿದ್ದೇನೆ. 0:00:11.000,0:00:15.000 ನಿಜ ಹೇಳಬೇಕು ಅಂದ್ರೆ, ನಾ ಹೊರಟೆ. (ನಗು) 0:00:15.000,0:00:19.000 ಮೂರು ವಿಚಾರಧಾರೆಗಳು 0:00:19.000,0:00:23.000 ಈ ಸಭೆಗಳಲ್ಲಿ ಕಂಡುಬಂದಿದೆ. 0:00:23.000,0:00:25.000 ಇವುಗಳು ನನ್ನ ಈ ಭಾಷಣಕ್ಕೆ ಪ್ರಸಕ್ತವಾಗಿವೆ. 0:00:25.000,0:00:29.000 ಮೊದಲನೆಯದಾಗಿ, ಮಾನವನ ಕ್ರಿಯಾತ್ಮಕತೆಗೆ ಅದ್ಬುತವಾದ ಸಾಕ್ಷಿ 0:00:29.000,0:00:32.000 ನಾವು ಕೇಳಿದ ಪ್ರತಿಯೊಂದು ಭಾಷಣದಲ್ಲಿಯೂ 0:00:32.000,0:00:35.000 ಹಾಗೂ ಇಲ್ಲಿ ನೆರೆದಿರುವ ಪ್ರತಿಯೊಬ್ಬ ವ್ಯಕಿಯಲ್ಲಿಯೂ ಇದು ಗೋಚರವಾಗುತ್ತಿದೆ. ಇದರ ವ್ಯವಿದ್ಯಥೆ 0:00:35.000,0:00:38.000 ಹಾಗೂ ಇದರ ಪರಿಮಿತಿ ಅಪಾರ. ಎರಡನೆಯದಾಗಿ, 0:00:38.000,0:00:41.000 ಇದರಿಂದಾಗಿ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದೆ ಏನು ನಡಿಯಬಹುದು ನಮಗೆ ಹೊತ್ತಿಲ್ಲ, 0:00:41.000,0:00:43.000 ಭವಿಷ್ಯತ್ ಕಾಲದ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇಲ್ಲ. 0:00:43.000,0:00:45.000 ಹೇಗೆ ಇದು ರೂಪಗೊಳ್ಳುವುದೆಂದು. 0:00:45.000,0:00:48.000 ನನಗೆ ಶಿಕ್ಷಣದ ವಿಚಾರದಲ್ಲಿ ಬಹಳ ಆಸಕ್ತಿ -- 0:00:48.000,0:00:51.000 ವಾಸ್ತವವಾಗಿ, ನಾನು ಕಂಡ ಸಂಗತಿ ಏನಂದ್ರೆ ಶಿಕ್ಷಣದ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. 0:00:51.000,0:00:53.000 ನಿಮಗೆ ಇಲ್ಲವೇ ? ಇದು ನನಗೆ ಬಹಳ ಕುತೂಹಲಕಾರಿಯಾದ ಸಂಗತಿ. 0:00:53.000,0:00:56.000 ನೀವು ಯಾವುದಾರು ಊಟದ ಔತಣಕ್ಕೆ ಹೋಗಿ, 0:00:56.000,0:00:59.000 ನಾನು ಶಿಕ್ಷಣದ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಅಂತ ಹೇಳಿ -- 0:00:59.000,0:01:06.000 ವಾಸ್ತವವಾಗಿ, ನೀವು ಶಿಕ್ಷಣ ಕ್ಷೇತ್ರದಲ್ಲೇ ಇದ್ದರೆ, ಹೆಚ್ಚಿನಪಕ್ಷ ನೀವು ಯಾವ ಔತಣದಲ್ಲೂ ಇರಲ್ಲ. 0:01:06.000,0:01:09.000 (ನಗು) ಇದ್ದರುನೂ ಯಾರು ನಿಮ್ಮನ್ನ ಕೇಳಲ್ಲ. 0:01:09.000,0:01:14.000 ನಾ ಕೇಳಿದರೂ ತಿರುಗಿ ನನ್ನನ್ನ ಯಾರು ಕೇಳಲ್ಲ, ಆಶ್ಚರ್ಯ. ಇದು ನನಗೆ ವಿಚಿತ್ರ ಅನ್ಸುತ್ತೆ. 0:01:14.000,0:01:16.000 ಆದರೂ ಊಹಿಸಿಕೊಳ್ಳಿ, ನೀವು ಯಾರನ್ನೋ ಮಾತಾಡಿಸ್ತೀರಿ, 0:01:16.000,0:01:18.000 ಆಗ ಅವರು ನಿಮ್ಮನ್ನ, "ನೀವು ಏನು ಮಾಡ್ತೀರಿ?" ಅಂಥ ಕೇಳ್ತಾರೆ 0:01:18.000,0:01:20.000 ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ ಎಂದರೆ 0:01:20.000,0:01:24.000 ಆಗ ಅವರ ಮುಖ ಹೇಗೆ ಕೋಪದಿಂದ ಕೆಂಪಿಡುತ್ತದೆಂದು ನೀವು ಕಾಣಬಹುದು. ಅವರ ಭಾವನೆ, 0:01:24.000,0:01:30.000 "ಅಯ್ಯೋ ದೇವರೇ, ನಾನೇ ಯಾಕೆ ಸಿಕ್ಬಿದ್ದೆ ? ಇಡೀ ವಾರದಲ್ಲಿ ನನ್ನ ಒಂದು ಬಿಡುವಿನ ಸಂಜೆ." (ನಗು) 0:01:30.000,0:01:32.000 ನೀವು ಅವರ ಓದಿನ ಬಗ್ಗೆ ಕೇಳಿದಾಗ ಮಾತ್ರ 0:01:32.000,0:01:34.000 ಅವರು ನಿಮ್ಮನ್ನ ಚೆನ್ನಾಗಿ ದಬಾಯಿಸ್ತಾರೆ. ಏಕಂದರೆ ಇದು, ಒಂದು ವಿಷಯ 0:01:34.000,0:01:37.000 ವಕ್ತಿಗಳ ಅಂತರಾಳವನ್ನು ಮುಟ್ಟುತ್ತದೆ, ನಿಜ ಅಲ್ವೆ ? 0:01:37.000,0:01:40.000 ಇದು ಮತ ಹಾಗೂ ಹಣಕಾಸು ಅಂತಹ ವಿಚಾರಗಳ ತರಹ. 0:01:40.000,0:01:44.000 ನನಗೆ ಶಿಕ್ಷಣದಲ್ಲಿ ಬಹಳ ಆಸಕ್ತಿ , ನನಗ್ ಅನ್ಸುತ್ತೆ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತೆ. 0:01:44.000,0:01:46.000 ನಾವೆಲ್ಲರೂ ಇದರ ದೊಡ್ಡ ಪಾಲುದಾರರು, 0:01:46.000,0:01:49.000 ಏಕಂದರೆ, ಶಿಕ್ಷಣವೆ 0:01:49.000,0:01:52.000 ನಮ್ಮನು ಅನಿರ್ದಿಷ್ಟ ಭವಿಷ್ಯದೆಡೆಗೆ ಕೊಂಡೊಯ್ಯಬೇಕು 0:01:52.000,0:01:55.000 ನೀವು ಯೋಚಿಸಿ ನೋಡಿ, ಈ ವರ್ಷದಿಂದ ಶಾಲೆಗೆ ಹೋಗುವ ಮಕ್ಕಳು 0:01:55.000,0:02:01.000 ೨೦೬೫ ರಲ್ಲಿ ನಿವೃತ್ತಿಯಾಗುತ್ತಾರೆ. 0:02:01.000,0:02:04.000 ಕಳೆದ ನಾಲ್ಕು ದಿನಗಳಿಂದ ನಡೆದ ಪಾಂಡಿತ್ಯ ಪ್ರದರ್ಶನದ ನಂತರವೂ 0:02:04.000,0:02:06.000 ಈ ಜಗತ್ತು ಮುಂದಿನ ಐದು ವರ್ಷಗಳಲ್ಲಿ ಹೇಗಿರುತ್ತೆ 0:02:06.000,0:02:08.000 ಅಂಥ ಯಾರಿಗೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳನ್ನ 0:02:08.000,0:02:11.000 ಈ ಭವಿಷ್ಯವನ್ನು ಎದುರಿಸಲು ಶಿಕ್ಷಿಸಬೇಕು. ನನಗೆ ಅನ್ಸುತ್ತೆ ಈ ಅನಿರ್ದಿಷ್ಟತೆ 0:02:11.000,0:02:13.000 ಅದ್ಬುಥವಾದದ್ದು . 0:02:13.000,0:02:15.000 ಮೂರನೆಯದಾಗಿ, 0:02:15.000,0:02:20.000 ನಾವೆಲ್ಲರೂ ಒಪ್ಪುವಂತಹ ವಿಷಯ ಅಂದ್ರೆ 0:02:20.000,0:02:23.000 ಮಕ್ಕಳ ಅದ್ಭುತವಾದ ಸಾಮರ್ಥ್ಯಗಳು -- 0:02:23.000,0:02:25.000 ಆವಿಷ್ಕಾರಕ್ಕೆ ಬೇಕಾದ ಅವರ ಸಾಮರ್ಥ್ಯ. ನಿನ್ನೆ ರಾತ್ರಿ ನಾವು ನೋಡಿದ ಸಿರೀನಳು ಒಂದು ವಿಸ್ಮಯ 0:02:25.000,0:02:28.000 ಅಲ್ಲವೇ ? ಸುಮ್ಮನೆ ಅವಳು ಏನು ಮಾಡಬಹುದು ಅನ್ನುವಂತಹದ್ದು 0:02:28.000,0:02:33.000 ಹಾಗೂ ಅವಳು ಅಸಾಧಾರಣವಾದವಳು, ಆದರೆ ಒಂದು ದ್ರಿಷ್ಟಿಕೊನದಲ್ಲಿ 0:02:33.000,0:02:36.000 ಮಕ್ಕಳೆಲ್ಲರನ್ನ ನೋಡಿದರೆ ಅಷ್ಟು ಅಸಾಧಾರಣ ಅಲ್ಲ ಅನ್ಸುತ್ತೆ. 0:02:36.000,0:02:39.000 ನಾವು ಇಲ್ಲಿ ಕಾಣುವುದೆನಂದರೆ, ಇವಳಿಗೆ ಅಸಾಧಾರಣ ಸಂಕಲ್ಪ ಶಕ್ತಿ ಇದೆ 0:02:39.000,0:02:41.000 ಹಾಗೂ ಇವಳು ಒಂದು ಪ್ರತಿಭೆಯನ್ನ ಆರಿಸಿಕೊಂಡಿದ್ದಾಳೆ. ನನ್ನ ವಾದ ಏನಂದರೆ 0:02:41.000,0:02:43.000 ಎಲ್ಲ ಮಕ್ಕಳಿಗೂ ಅಗಾಧವಾದ ಪ್ರತಿಭೆ ಇರುತ್ತದೆ. 0:02:43.000,0:02:45.000 ಆದರೆ ನಾವು ಅದನ್ನ ಪೋಲು ಮಾಡ್ತೀವಿ, ಅದು ನಿರ್ದಾಕ್ಷಿಣ್ಯವಾಗಿ. 0:02:45.000,0:02:48.000 ಅದಕ್ಕೆ ನಾನು ಶಿಕ್ಷಣದ ಬಗ್ಗೆ ಮಾತಾಡಲು ಬಯಸ್ತೀನಿ ಮತ್ತು 0:02:48.000,0:02:51.000 ಕ್ರಿಯಾತ್ಮಕತೆಯ ಬಗ್ಗೆ ಮಾತಾಡಲು ಇಚ್ಛೆ ಪಡ್ತೀನಿ. ನನ್ನ ಅಭಿಪ್ರಾಯ ಏನಂದ್ರೆ 0:02:51.000,0:02:54.000 ಕ್ರಿಯತ್ಮಕತೆಗೆ ಈಗ ಮುಖ್ಯ ಸ್ಥಾನ ಇದೆ ಹೇಗೆ ಸಾಕ್ಷರತೆಗೆ ಇದಿಯೋ ಹಾಗೆ, 0:02:54.000,0:02:58.000 ಮತ್ತು ನಾವು ಅದಕ್ಕೆ ಅಷ್ಟೇ ಮಹತ್ವದ ಸ್ಥಾನ ಕೊಡಬೇಕು. 0:02:58.000,0:03:06.000 (ಚಪ್ಪಾಳೆ) ಧನ್ಯವಾದಗಳು. ಅಷ್ಟೇ, ಅಲ್ಲಿಗೆ ಮುಗಿತು. 0:03:06.000,0:03:10.000 ನಿಮ್ಮೆಲ್ಲರಿಗೂ ಧನ್ಯವಾದಗಳು. (ನಗು). ಇನ್ನು ೧೫ ನಿಮಿಷಗಳು ಉಳಿಯಿತು. 0:03:10.000,0:03:17.000 ನಾನು ಹುಟ್ಟಿದೆ -- ಇಲ್ಲ (ನಗು) 0:03:17.000,0:03:21.000 ನಾನು ಈಚೆಗೆ ಒಂದು ಮಹತ್ತರವಾದ ಕಥೆ ಕೇಳ್ದೆ -- ಅದನ್ನ ಹೇಳೋಕ್ಕೆ ನನಗೆ ತುಂಬಾ ಇಷ್ಟ -- 0:03:21.000,0:03:25.000 ಒಂದು ಚಿಕ್ಕ ಹುಡುಗಿಯ ಬಗ್ಗೆ . ಅವಳು ಚಿತ್ರ ಬಿಡಿಸುವ ತರಗತಿಯಲ್ಲಿದ್ದಳು. ಅವಳಿಗೆ ಆರು ವರ್ಷ. 0:03:25.000,0:03:27.000 ಮತ್ತೆ ಅವಳು ಹಿಂದೆ ಚಿತ್ರ ಬಿಡಿಸುತ್ತ ಕುಳಿತಿದ್ಲು , 0:03:27.000,0:03:29.000 ಅವಳ ಶಿಕ್ಷಕಿ ಹೇಳ್ತಿದ್ರು ಈ ಹುಡುಗಿ ಯಾವತ್ತೂ ಗಮನವಿಟ್ಟು 0:03:29.000,0:03:33.000 ಪಾಠ ಕೇಳ್ತಿರಲಿಲ್ಲ. ಆದರೆ ಈ ಚಿತ್ರ ಬಿಡಿಸುವ ತರಗತಿಯಲ್ಲಿ ಮಾತ್ರ ಗಂಭೀರವಾಗಿ ಕೆಲಸ ಮಾಡ್ತಿದ್ಲು . 0:03:33.000,0:03:35.000 ಅಚ್ಚರಿಗೊಂಡ ಶಿಕ್ಷಕಿ ಇವಳ ಹತ್ತಿರ ಹೋಗಿ 0:03:35.000,0:03:38.000 "ಯಾವ ಚಿತ್ರ ಬಿಡಿಸ್ತಿದಿಯ ?" ಎಂದು ಕೇಳಿದ್ರು 0:03:38.000,0:03:41.000 "ನಾನು ದೇವರ ಚಿತ್ರ ಬಿಡಿಸ್ತಿದೀನಿ" ಎಂದು ಉತ್ತರಿಸಿದಳು ಅ ಹುಡುಗಿ 0:03:41.000,0:03:44.000 ಅದಕ್ಕೆ ಶಿಕ್ಷಕಿ ಹೇಳಿದ್ರು, "ಯಾರಿಗೂ ದೇವರು ಹೇಗಿದ್ದಾನೆ ಅಂತ ಗೊತಿಲ್ವಲ್ಲ." 0:03:44.000,0:03:51.000 ಅದಕ್ಕೆ ಹುಡುಗಿ ಹೇಳಿದಳು, "ಇನ್ನೊಂದು ನಿಮಿಷದಲ್ಲಿ ಎಲ್ಲರಗೂ ತಿಳಿಯುತ್ತೆ." 0:03:51.000,0:03:52.000 (ನಗು) 0:03:52.000,0:03:57.000 ಇಂಗ್ಲೆಂಡಿನಲ್ಲಿ ನನ್ನ ಮಗನಿಗೆ ನಾಲ್ಕು ವರ್ಷವಾಗಿದ್ದಾಗ -- 0:03:57.000,0:04:00.000 ವಾಸ್ತವವಾಗಿ ಎಲ್ಲ ಕಡೆಯೂ ಅವನಿಗೆ ನಾಲ್ಕೇ ವರ್ಷ, (ನಗು) 0:04:00.000,0:04:06.000 ಗಂಭೀರವಾಗಿ ಹೇಳ್ಬೇಕು ಅಂದ್ರೆ, ಅವನಿಗೆ ನಾಲ್ಕು ವರ್ಷ ಆಗ. 0:04:06.000,0:04:08.000 ಅವನು "ನೇಟಿವಿಟಿ" ಅನ್ನುವ ನಾಟಕದಲ್ಲಿದ್ದ. 0:04:08.000,0:04:11.000 ನಿಮಗೆ ಇದರ ಕಥೆ ಜ್ಞಾಪಕ ಇದೆಯೇ ? ಇಲ್ಲ , ಇದು ತುಂಬಾ ದೊಡ್ಡದಾಗಿತ್ತು. 0:04:11.000,0:04:14.000 ಇದು ತುಂಬಾ ದೊಡ್ಡ ಕಥೆ. ಇದರ ಎರಡನೆಯ ಕಂತಲ್ಲಿ ಮೆಲ್ ಗಿಬ್ಸನ್ ಮಾಡಿದಾರೆ. 0:04:14.000,0:04:19.000 ಇದನ್ನ ನೀವು ನೋಡಿರಬಹುದು: "ನೇಟಿವಿಟಿ ೨". ಆದರೆ ಜೇಮ್ಸ್ ಗೆ ಜೋಸೆಫ್ ಪಾತ್ರ ಸಿಕ್ಕಿತ್ತು. 0:04:19.000,0:04:22.000 ಇದು ನಮ್ಮೆಲ್ಲರಿಗೆ ರೋಮಾಂಚಕ ಸಂಗತಿಯಾಗಿತ್ತು. 0:04:22.000,0:04:24.000 ಇದನ್ನು ನಾಟಕಾದ ಪ್ರಮುಖ ಪಾತ್ರವೆಂದು ಪರಿಗಣಿಸಿದ್ದೆವು. 0:04:24.000,0:04:26.000 ನಮ್ಮ ಏಜಂಟರು ಟಿ- ಷರಟುಗಳನ್ನು ಧರಿಸಿ ಇಡೀ ಜಾಗವನ್ನು ಮುತ್ತಿದ್ದರು. 0:04:26.000,0:04:29.000 "ಜೇಮ್ಸ್ ರಾಬಿನ್ಸನ್ ಅವರೇ ಜೋಸೆಫ್!" (ನಗು) 0:04:29.000,0:04:31.000 ಅವರು ಮಾತಾಡೋ ಗೋಜಿರಲಿಲ್ಲ, ಆದರೆ ನಿಮಗೆ ಸನ್ನಿವೇಶ ಗೊತ್ತು 0:04:31.000,0:04:34.000 ಮೂರು ಜನ ರಾಜರು ಉಡುಗರೆಗಳನ್ನು ಹೊತ್ತು ಒಳಗೆ ಬರ್ತಾರೆ. 0:04:34.000,0:04:36.000 ಮತ್ತು ಚಿನ್ನ, ಫ್ರಾಂಕಿನ್ಸೆನ್ಸ್ ಹಾಗೂ ಮಿರ್ಹ್ (ಸುಗಂಧ ದ್ರವ್ಯಗಳು) ಇವುಗಳನ್ನು ತರುತ್ತಾರೆ. 0:04:36.000,0:04:38.000 ನಿಜವಾಗಿ ನಡೆದ ಸಂಗತಿ ಇದು. ನಾವು ಅಲ್ಲಿ ಕುಳಿತಿದ್ದೆವು 0:04:38.000,0:04:40.000 ಮತ್ತೆ ನನಗೆ ಅನ್ಸುತ್ತೆ ಅವರು ದೃಶ್ಯಾವಳಿಯ ಅನುಕ್ರಮವನ್ನು ತಪ್ಪಿದರು, 0:04:40.000,0:04:42.000 ಯಾಕಂದ್ರೆ ನಾವು ತರುವಾಯ ನಮ್ಮ ಚಿಕ್ಕ ಹುಡುಗನ ಹತ್ತಿರ ಕೇಳಿದೆವು, 0:04:42.000,0:04:44.000 "ನಿನಗೆ ಸರಿಯನ್ನಿಸ್ತ ?" ಅದಕ್ಕೆ ಅವನು, "ಹೌದು, ಯಾಕೆ, ಅದು ತಪ್ಪಾಗಿತ್ತಾ?" 0:04:44.000,0:04:46.000 ಅವರು ಸ್ವಲ್ಪ ಬದಲಾವಣೆ ಮಾಡಿದ್ರು, ಅಷ್ಟೇ. 0:04:46.000,0:04:47.000 ಆ ದ್ರಿಶ್ಯದ ವಿವರ ಹೀಗೆ, ಮೂರು ಹುಡುಗರು ಬಂದರು, 0:04:47.000,0:04:49.000 ನಾಲ್ಕು ವರ್ಷದವರು, ತಲೆಮೇಲಿ ಟೀ-ಟವಲ್ಗಳನ್ನ ಹೊದೆದವರು, 0:04:49.000,0:04:52.000 ಮತ್ತು ಅವರು ಹೊತ್ತು ತಂದ ಡಬ್ಬಗಳನ್ನ ಕೆಳಗಿಟ್ಟು , 0:04:52.000,0:04:54.000 ಮೊದಲನೆಯ ಬಾಲಕ ಹೇಳಿದ, "ನಾನು ಚಿನ್ನವನ್ನು ತಂದಿದ್ದೇನೆ." 0:04:54.000,0:04:57.000 ಎರಡನೆಯ ಬಾಲಕ ಹೇಳಿದ, "ನಾನು ಮಿರ್ಹವನ್ನು ತಂದಿದ್ದೇನೆ." 0:04:57.000,0:05:11.000 ಮೂರನೆಯ ಬಾಲಕ ಹೇಳಿದ, "ಫ್ರಾಂಕ್ ಇದನ್ನು ಕಳಿಸಿದ." (ನಗು) 0:05:11.000,0:05:13.000 ಇವೆಲ್ಲ ಸಂಗತಿಗಳಲ್ಲಿ ಸಾಮಾನ್ಯವಾದ ಅಂಶವೇನಂದರೆ ಮಕ್ಕಳು [ ಇಲ್ಲಿ ಏನು ? ] 0:05:13.000,0:05:16.000 ಅವರಿಗೆ ಗೊತ್ತಿಲ್ಲ ಅಂದ್ರೂ ಸಹ, ಅವರು ಹಿಂಜರಿಯಲ್ಲ. 0:05:16.000,0:05:19.000 ಸರಿ ಅಲ್ವೇ ? ಅವರು ತಪ್ಪು ಮಾಡೋಕೆ ಹೆದರೋದಿಲ್ಲ. 0:05:19.000,0:05:24.000 ಇವಾಗ, ಕ್ರಿಯಾತ್ಮಕವಾಗಿರೋದು ಹಾಗೂ ತಪ್ಪು ಮಾಡೋದು ಒಂದೇ ಅಂತ ನಾ ಹೇಳ್ತಿಲ್ಲ. 0:05:24.000,0:05:25.000 ಆದರೆ ನಮಗೆ ಗೊತ್ತಿರೋದು ಏನಂದ್ರೆ, 0:05:25.000,0:05:28.000 ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ, 0:05:28.000,0:05:31.000 ನೀವು ಸ್ವಂತವಾಗಿ ಏನೂ ಮಾಡೋಕ್ಕೆ ಆಗಲ್ಲ. 0:05:31.000,0:05:34.000 ನೀವು ತಪ್ಪು ಮಾಡೋಕೆ ಸಿದ್ದವಿಲ್ಲ ಅಂದ್ರೆ. ಮತ್ತೆ ದೊಡ್ದವರಾಗುವಷ್ಟರಲ್ಲಿ, 0:05:34.000,0:05:36.000 ಮಕ್ಕಳು ಬಹುಪಾಲಿಗೆ ಈ ಸಾಮರ್ಥ್ಯವನ್ನ ಕಳಕೊಂಡುಬಿಡ್ತಾರೆ. 0:05:36.000,0:05:39.000 ದೊಡ್ದವರಾಗ್ತಿದ್ದಾಗೆ ತಪ್ಪು ಮಾಡೋಕ್ಕೆ ಭಯ ಪಟ್ಕೊಳ್ತಾರೆ. 0:05:39.000,0:05:41.000 ನಾವು ನಮ್ಮ ಕಂಪನಿಗಳನ್ನ ಹೀಗೆ ನಡಿಸ್ತೀವಿ. 0:05:41.000,0:05:44.000 ನಾವು ತಪ್ಪುಗಳಿಗೆ ಕಳಂಕದ ಭಾವನೆ ಹಚ್ತೀವಿ . ಇವಾಗ ನಾವು 0:05:44.000,0:05:47.000 ನಮ್ಮ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನ ಹೀಗೆ ನಡಿಸ್ತಿದೀವಿ, 0:05:47.000,0:05:50.000 ಇದರಲ್ಲಿ ತಪ್ಪುಗಳನ್ನ ಮಾಡುವುದೆಂದರೆ ಘೋರ ಅಪರಾಧ. 0:05:50.000,0:05:53.000 ಪರಿಣಾಮ ಏನಂದರೆ ನಾವು ವ್ಯಕ್ತಿಗಳನ್ನ ತಮ್ಮ ಕ್ರಿಯಾತ್ಮಕ ಸಾಮರ್ಥ್ಯವನ್ನ 0:05:53.000,0:05:56.000 ಬೆಳೆಸದ ಹಾಗೆ ಶಿಕ್ಷಿಸ್ತಿದೀವಿ. ಪಿಕಾಸ್ಸೋ ಮಹಾಶಯ ಒಮ್ಮೆ ಹೀಗೆ ನುಡಿದಿದ್ದ: 0:05:56.000,0:05:59.000 ಅವನು ಹೇಳಿದ್ದ ಎಲ್ಲ ಮಕ್ಕಳೂ ಹುಟ್ಟು ಕಲೆಗಾರರು. 0:05:59.000,0:06:03.000 ಸಮಸ್ಯೆ ಏನಂದರೆ ಅವರು ಬೆಳೆಯುತ್ತಿದ್ದ ಹಾಗೆ ಕಲಾವಿದರಾಗಿ ಉಳಿಯುವುದು. ನಾನು ಇದನ್ನ ಸಂಪೂರ್ಣವಾಗಿ ನಂಬುತ್ತೀನಿ: 0:06:03.000,0:06:05.000 ಏನಂದ್ರೆ, ನಾವು ಬೆಳೆಯುತಿದ್ದ ಹಾಗೆ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳುವುದಿಲ್ಲ 0:06:05.000,0:06:08.000 ಅದರಿಂದ ದೂರವಾಗ್ತೀವಿ. ಸರಿಯಾಗಿ ಹೇಳೋದಾದ್ರೆ, ಶಿಕ್ಷಣದ ದೆಸೆಯಿಂದ ಇದು ನಡೆಯುತ್ತದೆ. 0:06:08.000,0:06:10.000 ಯಾಕೆ ಹೀಗೆ ? 0:06:10.000,0:06:14.000 ನಾನು ಐದು ವರ್ಷಗಳ ಹಿಂದೆ ಸ್ಟ್ರಾಟ್ಫೋರ್ಡ್-ಆನ್-ಅವೊನ್ ಅಲ್ಲಿ ವಾಸಿಸುತ್ತಿದ್ದೆ. 0:06:14.000,0:06:16.000 ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. 0:06:16.000,0:06:20.000 ನೀವೇ ಊಹಿಸಬಹುದು ಎಂತಹ ಸಲೀಸಾದ ಪರಿವರ್ತನೆ ಅದು ಅಂತ. 0:06:20.000,0:06:22.000 (ನಗು) 0:06:22.000,0:06:24.000 ನಾವು ಸ್ನಿಟ್ಟೆರ್-ಫೀಲ್ಡ್ ಎಂಬ ಜಾಗದಲ್ಲಿ ವಾಸಿದುತ್ತಿದ್ದೆವು, 0:06:24.000,0:06:26.000 ಸ್ಟ್ರಾಟ್ಫೋರ್ಡ್-ನ ಸ್ವಲ್ಪ ಆಚೆ, 0:06:26.000,0:06:31.000 ಶೇಕ್ಸ್-ಸ್ಪಿಯರ್ ನ ತಂದೆ ಜನಿಸಿದ ಊರು. ಹೊಸದೊಂದು ಆಲೋಚನೆಗೆ ಸಿಲುಕಿದಿರ ನೀವು ? ನನಗೆ ಬಂದಿತ್ತು ಈ ಆಲೋಚನೆ. 0:06:31.000,0:06:33.000 ಶೇಕ್ಸ್-ಸ್ಪಿಯರ್-ಗೆ ತಂದೆ ಇರುವ ವಿಷಯ ನೀವು ಯೋಚಿಸಿರಲಿಲ್ಲ, ಅಲ್ಲವೆ ? 0:06:33.000,0:06:35.000 ಏಕಂದ್ರೆ ನೀವು ಶೇಕ್ಸ್-ಸ್ಪಿಯರ್ ಮಗುವಾಗಿದ್ದ 0:06:35.000,0:06:37.000 ಅಂತಾನೂ ಯೋಚಿಸಿರಲಿಲ್ಲ, ಹೌದಲ್ಲವೆ ? 0:06:37.000,0:06:40.000 ಶೇಕ್ಸ್-ಸ್ಪಿಯರ್ ಏಳು ವರ್ಷದ ಬಾಲಕ ? ನಾನಂತೂ ಆಲೋಚಿಸಿರಲಿಲ್ಲ. ಅವನು 0:06:40.000,0:06:42.000 ಯಾವಾಗಲೋ ಒಂದು ಕಾಲದಲ್ಲಿ ಏಳು ವರ್ಷದ ಬಾಲಕನಾಗಿದ್ದ. ಅವನು 0:06:42.000,0:06:51.000 ಯಾರದೋ ಇಂಗ್ಲೀಷ್ ತರಗತಿಯಲ್ಲಿ ಇದ್ದ, ಅಲ್ಲವೆ ? [ ಇಲ್ಲಿ ಏನು ] 0:06:51.000,0:07:05.000 (ನಗು) "ನೀನು ಇನ್ನು ಕಷ್ಟ ಪಡಬೇಕು." ಅವನ ತಂದೆ ಅವನ್ನು ಮಲಗು ಅಂತ ಹೇಳೋದು, 0:07:05.000,0:07:08.000 ಶೇಕ್ಸ್-ಸ್ಪಿಯರ್-ಗೆ, "ಮಲಗು ನೀನು ಈಗ," 0:07:08.000,0:07:10.000 ವಿಲ್ಲಿಯಮ್ ಶೇಕ್ಸ್-ಸ್ಪಿಯರ್-ಗೆ, "ಪೆನ್ಸಿಲ್ ಕೆಳಗೆ ಹಾಕು 0:07:10.000,0:07:18.000 ಹಾಗೆ ಸುತ್ತಿ-ಬಳಸಿ ಮಾತಾಡಬೇಡ. ಎಲ್ಲಾರ್ಗೂ ಕಷ್ಟ ಆಗುತ್ತೆ ಅರ್ಥವಾಗುವುದಕ್ಕೆ ." 0:07:18.000,0:07:23.000 (ನಗು) 0:07:23.000,0:07:26.000 ನಾವು ಸ್ಟ್ರಾಟ್ಫೋರ್ಡನಿಂದ ಲಾಸ್ ಎನ್ಜಿಲೀಸ್ ಗೆ ತೆರೆಳಿದೆವು. 0:07:26.000,0:07:30.000 ಮತ್ತು ನಮ್ಮ ಈ ಬದಲಾವಣೆಯ ಬಗ್ಗೆ ಒಂದೆರಡು ಮಾತುಗಳನ್ನ ಆಡಲು ಇಷ್ಟ ಪಡ್ತೇನೆ 0:07:30.000,0:07:33.000 ನನ್ನ ಮಗನಿಗೆ ಊರು ಬಿಟ್ಟು ಬರಲು ಇಷ್ಟ ಇರಲಿಲ್ಲ. 0:07:33.000,0:07:36.000 ನನಗೆ ಎರಡು ಮಕ್ಕಳು. ಅವನಿಗೆ ೨೧ ವರ್ಷ ಈಗ; ನನ್ನ ಮಗಳಿಗೆ ೧೬. 0:07:36.000,0:07:38.000 ಅವನಿಗೆ ಲಾಸ್ ಎನ್ಜಿಲೀಸ್ ಗೆ ಹೋಗಲು ಮನಸು ಇರಲಿಲ್ಲ. ಅವನಿಗೆ ಆಸೆ ಏನೋ ಇತ್ತು, 0:07:38.000,0:07:43.000 ಆದರೆ ಅವನಿಗೆ ಅಬ್ಬಳು ಗರ್ಲ್-ಫ್ರೆಂಡ್ ಇದ್ದಳು ಇಂಗ್ಲೆಂಡಿನಲ್ಲಿ. ಅವನ ಪ್ರಾಣದ ಪ್ರೇಯಸಿಯಾಗಿದ್ದಳು, ಸಾರಾ ಅವಳ ಹೆಸರು. 0:07:43.000,0:07:45.000 ಒಂದು ತಿಂಗಳ ದೀರ್ಘ-ಕಾಲದಿಂದ ಅವಳ ಪರಿಚಯವಿತ್ತು. 0:07:45.000,0:07:48.000 [ ಇಲ್ಲಿ ಏನು ? ] 0:07:48.000,0:07:52.000 ಏಕಂದ್ರೆ ನೀವು ೧೬ ವರ್ಷಕ್ಕಿಂತ ದೊಡ್ದವರಾಗಿದ್ದರೆ ಇದು ಬಹಳ ದೀರ್ಘಾವಧಿ. 0:07:52.000,0:07:54.000 ಆದ್ದರಿಂದ ವಿಮಾನದಲ್ಲಿ ಬಹಳ ಬೇಸರ ಪಟ್ಕೊಂಡಿದ್ದ. 0:07:54.000,0:07:56.000 ಮತ್ತೆ ಹೇಳಿದ, "ನನಗೆ ಸಾರಾ ಅಂತ ಹುಡುಗಿ ಎಲ್ಲೂ ಸಿಗದಿಲ್ಲ." 0:07:56.000,0:07:58.000 ಆದರೆ ನಾವು ಬಹಳ ಖುಷಿಯಾಗಿದ್ವಿ , ನಿಜವಾಗಲೂ, 0:07:58.000,0:08:10.000 ಏಕಂದ್ರೆ ಅವಳೇ ನಾವು ದೇಶ ಬಿಟ್ಟು ಹೋಗಲು ಮುಖ್ಯ ಕಾರಣ. 0:08:10.000,0:08:13.000 (ನಗು) 0:08:13.000,0:08:16.000 ನೀವು ಅಮೇರಿಕಾಗೆ ಹೋದರೆ ಒಂದು ವಿಚಾರ ನಿಮ್ಮ ಗಮನಕ್ಕೆ ಬರುತ್ತದೆ 0:08:16.000,0:08:18.000 ನೀವು ಪ್ರಪಂಚದಲ್ಲಿ ಎಲ್ಲೇ ಹೋದರೂ ಇದು ಗಮನಕ್ಕೆ ಬರುತ್ತದೆ: 0:08:18.000,0:08:22.000 ಜಗತ್ತಿನ ಪ್ರತಿಯೊಂದು ಶಿಕ್ಷಣ ಪದ್ದತಿಯಲ್ಲೂ ಒಂದೇ ವಿಧವಾದ ಪಠ್ಯಕ್ರಮ. 0:08:22.000,0:08:24.000 ಎಲ್ಲದರಲ್ಲಿಯೂ ಒಂದೇ ಕ್ರಮ. ನೀವು ಎಲ್ಲೇ ಹೋಗಿ. 0:08:24.000,0:08:26.000 ನೀವು ಬೇರೆ ಇರಬಹುದು ಅಂದ್ಕೋಳ್ಬಹುದು, ಆದರೆ ಹಾಗೆ ಇಲ್ಲ. 0:08:26.000,0:08:29.000 ಮುಂಚೂಣಿಯಲ್ಲಿ ಗಣಿತ ಮತ್ತು ಭಾಷೆಗಳು, 0:08:29.000,0:08:31.000 ಆಮೇಲೆ ಸಮಾಜ ಶಾಸ್ತ್ರ, ಮತ್ತು ಕೆಳಗೆ ಕಲೆ. 0:08:31.000,0:08:33.000 ಭೂಮಿಯ ಎಲ್ಲ ಕಡೆಯೂ ಅಷ್ಟೇ. 0:08:33.000,0:08:36.000 ಹಾಗೂ ಎಲ್ಲಾ ಶಿಕ್ಷಣ ಪದ್ದತಿಗಳಲ್ಲೂ ಇದೇ ರೀತಿ, 0:08:36.000,0:08:38.000 ಕಲೆಯಲ್ಲಿಯೂ ಒಂದು ಕ್ರಮ ಉಂಟು. 0:08:38.000,0:08:40.000 ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ, ಆದ್ಯತೆ 0:08:40.000,0:08:43.000 ಆಮೇಲೆ ನಾಟಕ ಹಾಗೂ ನೃತ್ಯ. ಈ ಭೂಮಿಯ ಮೇಲೆ ಒಂದು ಶಿಕ್ಷಣ ಪದ್ದತಿಯೂ 0:08:43.000,0:08:45.000 ಇಲ್ಲ, ಯಾವುದಲ್ಲಿ ನೃತ್ಯವನ್ನ ದಿನನಿತ್ಯವೂ ಮಕ್ಕಳಿಗೆ ಕಲಿಸುತ್ತಾರೆ 0:08:45.000,0:08:48.000 ಯಾವ ರೀತಿಯಲ್ಲಿ ಗಣಿತವನ್ನ ಕಲಿಸುತ್ತೀವೋ ಹಾಗೆ. ಯಾಕೆ ? 0:08:48.000,0:08:50.000 ಯಾಕೆ ಇರಬಾರದು ? ನನಗೆ ಅನ್ಸುತ್ತೆ ಇದು (ನೃತ್ಯ) ಬಹಳ ಮುಖ್ಯ. 0:08:50.000,0:08:53.000 ಗಣಿತವೂ ಅತಿಮುಖ್ಯ , ಆದರೆ ನೃತ್ಯವೂ ಅಷ್ಟೇ ಮುಖ್ಯ. 0:08:53.000,0:08:56.000 ಮಕ್ಕಳನ್ನ ಬಿಟ್ಟರೆ ಯಾವಾಗಲೂ ನರ್ತಿಸ್ತಾರೆ, ನಾವೆಲ್ಲಾರೂ ಮಾಡ್ತೀವಿ. 0:08:56.000,0:08:59.000 ನಮ್ಮೆಲ್ಲರಿಗೂ ದೇಹ ಇದೆ, ಅಲ್ಲವೇ ? [ ಇಲ್ಲಿ ಏನು ?] 0:08:59.000,0:09:03.000 (ನಗು) ನಿಜವಾಗಿಲು, ಏನಾಗುತ್ತೆ ಅಂದ್ರೆ, 0:09:03.000,0:09:05.000 ಮಕ್ಕಳು ಬೆಳಿತಿದ್ದ ಹಾಗೆ, ನಾವು ಅವರನ್ನ ಶಿಕ್ಷಿಸ್ತೀವಿ 0:09:05.000,0:09:08.000 ಹೇಗೆಂದರೆ ಸೊಂಟದಿಂದ ಮೇಲಕ್ಕೆ . ಆಮೇಲೆ ನಾವು ಮೆದುಳಿನ ಮೇಲೆ ಹೆಚ್ಚಿನ ಗಮನವಹಿಸುತ್ತೀವಿ. 0:09:08.000,0:09:10.000 ಅದೂ ಒಂದು ಭಾಗದಲ್ಲಿ ಮಾತ್ರ. 0:09:10.000,0:09:14.000 ನೀವು ಶಿಕ್ಷಣವನ್ನು ಒಂದು ಅನ್ಯಗ್ರಹ ಜೀವಿಗೆ ಇರಬಹುದಾದ ದೃಷ್ಟಿಕೋನದಿಂದ ವೀಕ್ಷಿಸಿದರೆ, 0:09:14.000,0:09:17.000 ಹಾಗೂ "ಸಾರ್ವಜನಿಕ ಶಿಕ್ಷಣ ಪದ್ದತಿಯು ಯಾವ ಕಾರಣಕ್ಕೆ ಇದೆ ?" ಎಂದು ಕೇಳಿದರೆ, 0:09:17.000,0:09:19.000 ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ನೀವು ಇದರ (ಶಿಕ್ಷಣದ) ಉತ್ಪತ್ತಿಯನ್ನ ನೋಡಿದರೆ, 0:09:19.000,0:09:21.000 ಯಾರು ನಿಜವಾಗಿಲು ಯಶಸ್ವಿಗಳಾಗುತ್ತಾರೆ ಇದರಿಂದ, 0:09:21.000,0:09:23.000 ಯಾರು ಮಾಡಬೇಕಾದದ್ದನ್ನೆಲ್ಲಾನೂ ಮಾಡುತ್ತಾರೆ, 0:09:23.000,0:09:26.000 ಯಾರಿಗೆ [ಇಲ್ಲಿ ಏನು?], ಯಾರು ನಿಜವಾದ ವಿಜೇತರು -- 0:09:26.000,0:09:29.000 ನನಗೆ ಅನ್ಸುತ್ತೆ ನೀವು ಈ ನಿರ್ಣಯಕ್ಕೆ ಬರಬೇಕಾಗುತ್ತದೆ -- ಸಾರ್ವಜನಿಕ ಶಿಕ್ಷಣ ಪದ್ದತಿಯ ಮೂಲ ಉದ್ದೇಶ 0:09:29.000,0:09:30.000 ವಿಶ್ವದ ಎಲ್ಲ ಭಾಗದಲ್ಲೂ 0:09:30.000,0:09:34.000 ಏನಂದರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ತಯಾರು ಮಾಡೋದು. ಅಲ್ಲವೇ ? 0:09:34.000,0:09:36.000 ಅವರುಗಳೆ ಈ ಪದ್ದತಿಯ ಮುಂಚೂಣಿಯಲ್ಲಿ ಬರ್ತಾರೆ. 0:09:37.000,0:09:40.000 ಹಿಂದೆ ನೀನು ಒಬ್ಬ ಅಂತಹ ವ್ಯಕ್ತಿ ಆಗಿದ್ದೆ. (ನಗು) 0:09:40.000,0:09:44.000 ವಿಶ್ವವಿದ್ಯಾಲಯಗಳ ಪ್ರಾಧ್ಯಾಪರುಗಳನ್ನ ನಾನು ಮೆಚ್ಚುತ್ತೀನಿ, ಆದರೆ 0:09:44.000,0:09:48.000 ಅವರನ್ನ ನಾವು ಮಾನವನ ಸಾಧನೆಯ ಶಿಖರಕ್ಕೆ ಸೇರಿಸಬಾರದು. 0:09:48.000,0:09:50.000 ಅವರು ಒಂದು ತರಹದ ಜೀವದ ಪ್ರಕಾರ, 0:09:50.000,0:09:52.000 [ಇಲ್ಲಿ ಏನು?]. ಆದರೆ ಅವರು ಬಹಳ ಕುತೂಹಲಕಾರಿಯಾದ ಪ್ರಕಾರ, 0:09:52.000,0:09:54.000 ಅವರ ಮೇಲಿನ ನನ್ನ ಆದರದಿಂದ ಹೀಗೆ ಹೇಳ್ತೀನಿ. 0:09:54.000,0:09:57.000 ನನ್ನ ಅನುಭವದಲ್ಲಿ ಕಂಡ ಪ್ರಾಧ್ಯಾಪಕರ ಒಂದು ಕುತೂಹಲಕಾರಿಯಾದ ಸಂಗತಿ 0:09:57.000,0:10:00.000 ಎಲ್ಲರೂ ಅಲ್ಲ, ಆದರೆ ಸಾಮಾನ್ಯವಾಗಿ -- ಅವರುಗಳು ಮಾನಸಿಕ ಪ್ರಪಂಚದಲ್ಲಿ ಬದುಕುತ್ತಾರೆ 0:10:00.000,0:10:02.000 ಅವರ ಜೀವನ ಮೆದುಳಿಗೆ ಸೀಮಿತ, ಅದರಲ್ಲೂ ಒಂದು ಭಾಗದಲ್ಲಿ ಮಾತ್ರ. 0:10:02.000,0:10:06.000 ಅವರು ಕಾಯರಹಿತರು, ಗೊತ್ತ, ಒಂದು ರೀತಿ ಅಕ್ಷರಸಹ ನಿಜ, 0:10:06.000,0:10:08.000 ತಮ್ಮ ದೇಹವನ್ನು 0:10:08.000,0:10:17.000 ಮಿದುಳಿಗೆ ಒಂದು ಮಾದರಿಯ ವಾಹನವಾಗಿ ಕಾಣುತ್ತಾರೆ, ಅಲ್ಲವೇ ? 0:10:17.000,0:10:24.000 (ನಗು) ಅವರ ಮಿದುಳನ್ನ ಮೀಟಿಂಗ್-ಗಳಿಗೆ ಒಯ್ಯುವಂಥ ಮಾರ್ಗ. 0:10:24.000,0:10:27.000 ನಿಮಗೆ ದೇಹ-ಬಾಹಿರ ಅನುಭವದ ನಿಜವಾದ ಸಾಕ್ಷಿ ಬೇಕೆಂದರೆ 0:10:27.000,0:10:30.000 ನೀವು ಹಿರಿಯ ಶಿಕ್ಷಕರ ಕಾನ್ಫಾರೆನ್ಸೆಗೆ 0:10:30.000,0:10:32.000 ಹೋಗಿ 0:10:32.000,0:10:35.000 ಹಾಗೂ ಕೊನೆಯ ದಿನ ರಾತ್ರಿ ನಡೆಯುವ ಡಿಸ್ಕೋಗೆ ಒಂದು ಭೇಟಿ ನೀಡಿ 0:10:35.000,0:10:39.000 (ನಗು) ಅಲ್ಲಿ ನೀವು ನೋಡ್ತೀರಿ -- ದೊಡ್ಡವರಾದ ಪುರಷರು ಹಾಗೂ ಮಹಿಳೆಯರು 0:10:39.000,0:10:43.000 [ಇಲ್ಲಿ ಏನು]